ರಾಜಾ ಲಖಮಗೌಡ ಸರ್ದೇಸಾಯಿ ಕೋಟೆ ಗೋಚರ

ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ರಾಜಾಲಖಮಗೌಡ ಸರ್ದೇಸಾಯಿ ಕೋಟೆ ಕಾಣಿಸುತ್ತಿರುವುದು.
ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ರಾಜಾಲಖಮಗೌಡ ಸರ್ದೇಸಾಯಿ ಕೋಟೆ ಕಾಣಿಸುತ್ತಿರುವುದು.
Published on
ಚಿಕ್ಕೋಡಿ:
ಮಳೆ ಕೊರತೆಯಿಂದ ಜಲಾಶಯದ ನೀರು ಪಾತಾಳ ಕಂಡಿರುವ ಹಿನ್ನೆಲೆಯಲ್ಲಿ ಹಳೇ ವಂಟಮೂರಿ ಗ್ರಾಮದ ಸಮೀಪದಲ್ಲಿ ಗೋಚರವಾದ ಕೋಟೆ ನೋಡುಗರ ಗಮನ ಸೆಳೆಯುತ್ತಿದೆ.
ಹಿಡಕಲ್ ಜಲಾಶಯ ನಿರ್ಮಾಣಗೊಂಡ ಬಳಿಕ 1972-73ರ ಅವಧಿಯಲ್ಲಿ ಜಲಾಶಯದ ಹಿನ್ನೀರಿನಲ್ಲಿ ಈ ಕೋಟೆ, ಮುಳುಗಡೆಯಾಗಿದೆ. ರಾಜಾ ಲಖಮಗೌಡ ಸರ್ದೇಸಾಯಿ ಅವರ ವಾಸ ಸ್ಥಳವಾಗಿದ್ದ ಈ ಕೋಟೆ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕಲ್ಲು ಮತ್ತು ಗಚ್ಚು ಬಳಸಿ ನಿರ್ಮಿಸಲಾಗಿತ್ತು.
ಸುಮಾರು 15 ಅಡಿ ಎತ್ತರದ ಗೋಡೆಗಳು, ಭದ್ರ ಮುಖ್ಯದ್ವಾರ ಹಾಗೂ ಒಳಗೆ ಅನೇಕ ಕೋಣೆಗಳು ಇದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net