ಬ್ರಹ್ಮಕುಮಾರಿ ತುಳಸಾ ಮಾತನಾಡಿ, ಗುರಿ ಸಾಧನೆಗೆ ವಿದ್ಯಾರ್ಥಿಗಳಲ್ಲಿ ಸಂಯಮ, ಮನಸ್ಸಿನ ನಿಯಂತ್ರಣ ಹಾಗೂ ಏಕಾಗ್ರತೆ ಮುಖ್ಯವಾಗಿದೆ ಎಂದರು. ಬ್ರಹ್ಮಕುಮಾರಿ ನಾಗರತ್ನಾ, ಅತಿಥಿ ಶಿಕ್ಷಕ ಬಸವರಾಜ ನಾವಿ, ಅತಿಥಿ ಮಹಾಂತೇಶ ಕುಳೊಳ್ಳಿ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳಾದ ಸಚಿನ ಭಜಂತ್ರಿ, ಸಂಗಪ್ಪ ಭಜಂತ್ರಿ, ಜಾಹ್ನವಿ ಶೇಡಬಾಳ, ಭಾಗ್ಯಶ್ರೀ ಆಜೂರರನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಶಿವಯೋಗಿ ಮಂಗಸೂಳಿ, ವಿದ್ಯಾ ಹಿರೇಮಠ, ಮತ್ತಿತರರು ಇದ್ದರು.