ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಈಚೆಗೆ ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ, ಶಿವಾನಂದ ರ‍್ಯಾಯಿ, ರಾಜು ಕುಂಬಾರ, ರಾಜಮಾ ಮುಲ್ತಾನಿ ಇತರರಿದ್ದರು.
ನಾಗರಮುನ್ನೋಳಿ: ಗ್ರಾನದ ವಿದ್ಯಾರ್ಥಿಗಳು ಹಾಗೂ ಪಾಲಕರ ಬಹುದಿನಗಳ ಬೇಡಿಯಾಗಿದ್ದ ಪದವಿಪೂರ್ವ ಮಹಾವಿದ್ಯಾಲಯ ಆರಂಭಕ್ಕೆ ಸರ್ಕಾರ ಇದೇ ವರ್ಷದಿಂದ ಅನುಮತಿ ನೀಡಿದೆ. ವಾಣಿಜ್ಯ ವಿಭಾಗದ ಪ್ರವೇಶಗಳು ಈಗಾಗಲೇ ಪ್ರಾರಂಭವಾಗಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ ಹೇಳಿದರು.
ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಪತ್ರವನ್ನು ವಿತರಿಸಿ ಮಾತನಾಡಿದ ಅವರು, ಪಾಲಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಾಣಿಜ್ಯ ವಿಭಾಗದ ಜತೆಗೆ ಕಲಾ ಮತ್ತು ವಿಜ್ಞಾನ ವಿಭಾಗ ಪ್ರಾರಂಭಿಸಲು ಅನುಮತಿ ನೀಡಬೇಕು. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಮತ್ತು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಗಮನಕ್ಕೆ ತರಲಾಗುವುದು ಎಂದರು.
ಯುವ ಮುಖಂಡ ಶಿವಾನಂದ ರ‍್ಯಾಯಿ ಮಾತನಾಡಿ, ನಾಗರಮುನ್ನೋಳಿಯಲ್ಲಿ ಪಿಯು ಕಾಲೇಜು ಪ್ರಾರಂಭವಾಗಿರುವುದು ಸಂತಸದ ವಿಷಯ. ಗ್ರಾಮಸ್ಥರ ಮನವಿ ಮೇರೆಗೆ ಸಚಿವ ಸತೀಶ ಜಾರಕಿಹೊಳಿ, ಪದವಿಪೂರ್ವ ಇಲಾಖೆ ನಿರ್ದೇಶಕಿ ರಶ್ಮೀ ಮಹೇಶ ಅವರೊಂದಿಗೆ ಮಾತನಾಡಿ, ಪ್ರಸಕ್ತ ವರ್ಷದಿಂದ ಪಿಯು ಕಾಲೇಜು ಆರಂಭಿಸಲು ಸೂಚಿಸಿದ್ದರು. ಅದರಂತೆ ಕಾಲೇಜು ಆರಂಭವಾಗಿದೆ ಎಂದರು.
ಬಿಜೆಪಿ ಯುವ ಮುಖಂಡ ರಮೇಶ ಕಾಳನ್ನವರ ಮಾತನಾಡಿ, ಗ್ರಾಮದಲ್ಲಿ ಪಿಯು ಕಾಲೇಜು ಆರಂಭ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಯುವ ಮುಂಖಡ ರಾಜು ಕುಂಬಾರ, ಶಿವಪುತ್ರ ಮನಗೂಳಿ, ಗುಲಾಬ್ ಜಮಾದಾರ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷೆ ರಾಜಮಾ ಮುಲ್ತಾನಿ, ಬಾಬು ಕಾಳನ್ನವರ, ಎಂ.ಬಿ.ಆಲೂರೆ, ಲಕ್ಷ್ಮಿಸಾಗರ ಈಟಿ, ವಿಜಯ ಈಟಿ, ಮಾರುತಿ ರ‍್ಯಾಯಿ, ಮಾರುತಿ ಹುಲ್ಲೋಳಿ, ಸಂಜು ಭಾನೆ, ಡಾ.ಎನ್.ಎಸ್.ಕುರಬರ, ಸಿದ್ದು ಈಟಿ, ರಾಘವೇಂದ್ರ ಬಡಿಗೇರ, ಅಶೋಕ ದಡಿನ್ನವರ, ಎಂ.ಕೆ.ಖೋತ, ಎಸ್.ಆರ್.ಕುದರಗಿ, ಬಿ.ಎಸ್.ಕಮತೆ ಇತರರಿದ್ದರು.