ಮಂಗಾಯಿ ಜಾತ್ರೆಗೂ ಮುಂಚೆ ಮೂಲ ಸೌಕರ್ಯ ಕಲ್ಪಿಸಿ

ಮಂಗಾಯಿ ಜಾತ್ರೆಗೂ ಮುಂಚೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರಗೆ ಮನವಿ ಸಲ್ಲಿಸಿದರು. ಗಣಪತಿ ಕೊರಡೇಕರ, ಕಿಶೋರ ನಲವಡೆಕರ, ನಾರಾಯಣ ಪವಾರ, ಬಾಲಕೃಷ್ಣ ಚವ್ಹಾಣ ಇತರಿದ್ದರು.
ಮಂಗಾಯಿ ಜಾತ್ರೆಗೂ ಮುಂಚೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರಗೆ ಮನವಿ ಸಲ್ಲಿಸಿದರು. ಗಣಪತಿ ಕೊರಡೇಕರ, ಕಿಶೋರ ನಲವಡೆಕರ, ನಾರಾಯಣ ಪವಾರ, ಬಾಲಕೃಷ್ಣ ಚವ್ಹಾಣ ಇತರಿದ್ದರು.
Published on
ಬೆಳಗಾವಿ : ಆ.11ರಿಂದ ವಡಗಾವಿ ಗ್ರಾಮದೇವತೆ ಮಂಗಾಯಿ ದೇವಿ ಜಾತ್ರಾ ಮಹೋತ್ಸವ ಆರಂಭಗೊಳ್ಳುವ ಹಿನ್ನೆಲೆ ಜಾತ್ರೆಗೂ ಮುಂಚೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸುವಂತೆ ಮಂಗಾಯಿ ದೇವಸ್ಥಾನ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಭಕ್ತರು, ದೇವಸ್ಥಾನ ಮಂಡಳಿಯವರು ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುತ್ತಮುತ್ತಲಿನ ಪಾಟೀಲ ಗಲ್ಲಿ, ವಿಷ್ಣು ಗಲ್ಲಿ, ಕಾರಬಾರಗಲ್ಲಿ, ವಜೆ ಗಲ್ಲಿ, ಧಾಮಣೆ ರಸ್ತೆ, ಯರಮಾಳ ರಸ್ತೆ ಹಾಗೂ ಮಂಗಾಯಿ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಅಗೆದ ಗುಂಡಿಗಳನ್ನು ಮುಚ್ಚಿಲ್ಲ. ಮಂಗಾಯಿ ನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೂ ಅನೇಕ ಗುಂಡಿಗಳಿವೆ. ಹನುಮಾನ ಕೆರೆಯವರೆಗೆ ಎರಡೂ ಬದಿ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ ಮಳೆ ನೀರು ಅಲ್ಲಲ್ಲಿ ನಿಲ್ಲುತ್ತಿದೆ. ಇದನ್ನೆಲ್ಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯ ವಡಗಾವಿ ಮಂಗಾಯಿ ದೇವಸ್ಥಾನ ಬಳಿ ಹದಗೆಟ್ಟಿರುವ ರಸ್ತೆ.

ದೇವಸ್ಥಾನದ ಸುತ್ತಮುತ್ತ ಮಳೆ ನೀರು ರಸ್ತೆ ಮೇಲೆ ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡಬೇಕು. ಜಾತ್ರೆ ಅವಧಿಯಲ್ಲಿ ಬ್ರಹ್ಮಮಂದಿರದವರೆಗೆ ವಾಹನ ನಿಲುಗಡೆ ನಿಷೇಧಿಸಿ, ಅಲ್ಲಿರುವ ಕಸದ ತೊಟ್ಟಿ ಸ್ಥಳಾಂತರಿಸಬೇಕು. ಬೀದಿ ದೀಪಗಳ ದುರಸ್ತಿ, ಪೂಜಾ ಸಾಮಗ್ರಿ ಮತ್ತು ಹೂವಿನ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಮೀಸಲಿಡಲು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗಣಪತಿ ಕೊರಡೇಕರ, ಕಿಶೋರ ನಲವಡೆಕರ, ನಾರಾಯಣ ಪವಾರ, ಬಾಲಕೃಷ್ಣ ಚವ್ಹಾಣ, ಸುನೀಲ ಚವ್ಹಾಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net