ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ

ಬೈಲಹೊಂಗಲದಲ್ಲಿ ಮಳೆಯಿಂದ ಹಾನಿಗೊಳಗಾದ ಡಾ.ಬಿ.ಎಸ್.ಮಹಾಂತಶೆಟ್ಟಿ ಆಸ್ಪತ್ರೆಗೆ ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಭೇಟಿ ನೀಡಿ ಪರಿಶೀಲಿಸಿದರು. ಗುರು ಮೆಟಗುಡ್ಡ, ಸುಭಾಸ ತುರಮರಿ, ಶಿವಾನಂದ ಬಡ್ಡಿಮನಿ, ಲಕ್ಕಪ್ಪ ಕಾರಗಿ, ಸಚಿನ ಕಡಿ, ಪ್ರುಲ್ ಪಾಟೀಲ, ಗುರು ಅಂಗಡಿ ಇತರರಿದ್ದರು.

Published on
ಬೈಲಹೊಂಗಲ:
ಕಳೆದ 2-3 ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಸಮಸ್ಯೆ, ಮನೆ ಕುಸಿತ ಹಾಗೂ ಹಾನಿ ಪ್ರಮಾಣ ವೀಕ್ಷಿಸಿ ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಸಂಬಂಧಿತ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಮೂಲಕ ಜನರ ಸಮಸ್ಯೆ ಪರಿಹಾರಕ್ಕಾಗಿ ಸದಾ ಶ್ರಮಿಸುವುದಾಗಿ ವಿಜಯ ಮೆಟಗುಡ್ಡ ತಿಳಿಸಿದರು.
ಜಿಲ್ಲಾ ಸಹಕಾರ ಪ್ರಕೋಷ್ಠದ ಸಂಚಾಲಕ ಪ್ರುಲ್ ಪಾಟೀಲ, ವ್ಯಾಪಾರ ಪ್ರಕೋಷ್ಠದ ಸಹ ಸಂಚಾಲಕ ಗುರು ಅಂಗಡಿ, ಅಜ್ಜಪ್ಪ ಹೊಸೂರ, ಪುಂಡಲೀಕ ಇಂಚಲ, ರವಿ ಹೊಸೂರ, ಬಸವರಾಜ ಬಡಿಗೇರ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಸದಾಶಿವಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net