ಬುಡರಕಟ್ಟಿ ಗ್ರಾಮದ ಅಂಚೆ ಕಚೇರಿ ಕಟ್ಟಡ ಹಾಗೂ ಬಸವೇಶ್ವರ ಮಹಾದ್ವಾರ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್‌ಗೆ ಮನವಿ ಸಲ್ಲಿಸಿದರು. ಮಡಿವಾಳಪ್ಪ ಕಿತ್ತೂರು, ಗುರುಲಿಂಗಯ್ಯ ಪೂಜಾರಿ, ಸಂಗಯ್ಯ ಚಿಕ್ಕಮಠ ಇತರರಿದ್ದರು.
Published on:
Copied
Follow Us
ಮಲ್ಲಮ್ಮನ ಬೆಳವಡಿ:
ಬುಡರಕಟ್ಟಿ ಗ್ರಾಮದಲ್ಲಿ ಸ್ವಂತ ಕಟ್ಟಡ ಇಲ್ಲದೇ ಅಂಚೆ ಕಚೇರಿ, ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಿಸಿ ಕೊಡಬೇಕು. ಹಾಗೂ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಬಸವೇಶ್ವರ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಸಂಸದರ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಮುಖಂಡರಾದ ಮಡಿವಾಳಪ್ಪ ಕಿತ್ತೂರು, ಗುರುಲಿಂಗಯ್ಯ ಪೂಜಾರಿ, ಸಂಗಯ್ಯ ಚಿಕ್ಕಮಠ, ನಿಖಿಲ ಪಾಟೀಲ, ಮಹಾಂತೇಶ ಮಾಟೊಳ್ಳಿ, ಶಿವು ಜೋಳದ, ಯಾಸೀನ್ ಕಿತ್ತೂರು ಹಾಗೂ ಗ್ರಾಮಸ್ಥರು ಇದ್ದರು.