ಸವದತ್ತಿ ತಾಲೂಕು ಸಮನ್ವಯ ಶಿಕ್ಷಣ ಕೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಅಂಗವಿಕಲ ಮಕ್ಕಳಿಗೆ ಶಾಸಕ ವಿಶ್ವಾಸ ವೈದ್ಯ ಶೈಕ್ಷಣಿಕ ಸಾಮಗ್ರಿ ವಿತರಿಸಿದರು. ಅಕ್ಬರ್ ಅಲಿ ಖಾಜಿ, ಎಸ್.ವಿ.ಯರಡ್ಡಿ, ಚಂದ್ರು ಜಂಬ್ರಿ, ಉಮೇಶ ಗೌಡರ, ಎಸ್.ಬಿ.ಬೆಟ್ಟದ ಇತರರಿದ್ದರು.
ಸವದತ್ತಿ:ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಜತೆಗೆ ಅಗತ್ಯ ಸಹಾಯಕ ಪರಿಕರ ಒದಗಿಸುವುದು ಸಮಾಜದ ಜವಾಬ್ದಾರಿ ಆಗಿದ್ದು, ಇಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ಶಾಸಕರ ಗಹ ಕಚೇರಿಯಲ್ಲಿ ಮಂಗಳವಾರ ತಾಲೂಕು ಸಮನ್ವಯ ಶಿಕ್ಷಣ ಕೇಂದ್ರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಹಾಗೂ ಅಗತ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಇಒ ಅಕ್ಬರ್ ಅಲಿ ಖಾಜಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ವಿ.ಯರಡ್ಡಿ ಮಾತನಾಡಿ, ತಾಲೂಕಿನ ಒಟ್ಟು 240 ಅಂಗವಿಕಲ ವಿದ್ಯಾರ್ಥಿಗಳನ್ನು ವಿವಿಧ ಶೈಕ್ಷಣಿಕ ಹಾಗೂ ಸಹಾಯಕ ಸಾಮಗ್ರಿಗಳ ವಿತರಣೆಗೆ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ 80 ಮಕ್ಕಳಿಗೆ ವಿತರಿಸಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಉಮೇಶ ಗೌಡರ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಬೆಟ್ಟದ, ಬಿಆರ್‌ಪಿಗಳಾದ ಎಂ.ಎನ್.ಕರಡಿಗುಡ್ಡ, ಎಸ್.ಎಚ್. ಕರಿಗಾರ, ರತ್ನವ್ವ ಸೇತಸನದಿ ಇತರರಿದ್ದರು.