ಜಮೀನು ಕೊಟ್ಟ ರೈತರಿಗೆ ಸಂಪರ್ಕ ರಸ್ತೆ ಕೊಡಿ

 ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.  ಜಗದೀಶ ದೇವರಡ್ಡಿ, ಶಿವಾನಂದ ದೊಡ್ಡವಾಡ, ಚೂನಪ್ಪ ಪೂಜೇರಿ,ಪ್ರಕಾಶ ನಾಯಕ, ಸೋಮು ರೈನಾಪುರ ಇತರರಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಜಗದೀಶ ದೇವರಡ್ಡಿ, ಶಿವಾನಂದ ದೊಡ್ಡವಾಡ, ಚೂನಪ್ಪ ಪೂಜೇರಿ,ಪ್ರಕಾಶ ನಾಯಕ, ಸೋಮು ರೈನಾಪುರ ಇತರರಿದ್ದರು.
Published on

ಬೆಳಗಾವಿ :

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ನೂರಾರು ಎಕರೆ ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಟ್ಟಿದ್ದೇವೆ. ಆದರೆ, ನಮ್ಮದೇ ಜಮೀನಿಗೆ ಹೋಗಲು ದಾರಿ ಕೊಡುತ್ತಿಲ್ಲ ಎಂದು ಆರೋಪಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.

ರಾಮದುರ್ಗ, ಸವದತ್ತಿ, ಯರಗಟ್ಟಿ, ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮಗಳ ರೈತರು ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆಯಡಿ ಕೈಗೊಂಡಿರುವ ಹೈದರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಆದರೆ, ಕಾಮಗಾರಿ ಮುಂದುವರಿದಂತೆ ಉಳಿದ ಜಮೀನುಗಳಿಗೆ ಹೋಗಲು ಸಾಂಪ್ರದಾಯಿ ದಾರಿಗಳು ಬಂದ್ ಆಗಿವೆ. ಸರ್ವೀ ರಸ್ತೆ, ಸೇತುವೆ ನಿರ್ಮಿಸಿಲ್ಲ ಇದರಿಂದಾಗಿ ಟ್ರಾೃಕ್ಟರ್, ಸೇರಿ ಕೃಷಿ ಸಾಮಗ್ರಿಗಳನ್ನು ಜಮೀನಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ, ಪ್ರಾಧಿಕಾರದ ಗಮನಕ್ಕೆ ತಂದರು ಸ್ಪಂದಿಸುತ್ತಿಲ್ಲ.
ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ, ರೈತರ ಬೇಡಿಕೆಗಳಿಗೆ ಅನುಗುಣವಾಗಿ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳನ್ನು ನಿರ್ಮಿಸಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅವರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸದೆ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಡಳಿತ 15 ದಿನಗಳಲ್ಲಿ ಪರಿಹರಿಸಬೇಕು. ಇಲ್ಲದಿದ್ದರೆ ಹೆದ್ದಾರಿ ಕಾಮಗಾರಿ ಬಂದ್ ಮಾಡಿ ಅಹೋರಾತ್ರಿ ಧರಣಿ ಕೈಗೊಳ್ಳುತ್ತೇವೆ. ರೈತರಿಗೆ ಸ್ಪಂದಿಸದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಇಂಜಿನಿಯರ್‌ಗಳು, ಗುತ್ತಿಗೆದಾರರು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಜಗದೀಶ ದೇವರಡ್ಡಿ, ಶಿವಾನಂದ ದೊಡ್ಡವಾಡ, ಚೂನಪ್ಪ ಪೂಜೇರಿ,ಪ್ರಕಾಶ ನಾಯಕ, ಸೋಮು ರೈನಾಪುರ, ಬಾಬುಗೌಡ ಪಾಟೀಲ, ಹನಮಂತ ಕಾಮನ್ನವರ, ಸಂತೋಷ ಬಟಕುರ್ಕಿ, ವೆಂಕಣ್ಣ ಗಂಗರಡ್ಡಿ, ರಾಚಂದ್ರ ಲಮಾಣಿ ಇತರರಿದ್ದರು.
.........................
ಬಾಕ್ಸ್
ರೈತರ ಪ್ರಮುಖ ಬೇಡಿಕೆ
*ಸರ್ವೀಸ್ ರಸ್ತೆ ನಿರ್ಮಿಸಬೇಕು
*ಮೇಲ್ಸೇತುವೆ ನಿರ್ಮಿಸಬೇಕು
* ಅಗತ್ಯವಿರುವ ಕಡೆ ಅಂಡರ್‌ಪಾಸ್ ಕಲ್ಪಿಸಬೇಕು
*ಕಾಂಕ್ರೀಟ್ ತಡೆಗೋಡೆಗಳನ್ನು ತೆರವುಗೊಳಿಸಬೇಕು
*ಕೃಷಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು
............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net