ಉದ್ಯೋಗಕ್ಕಾಗಿ ತಾಪಂ ಎದುರು ಪ್ರತಿಭಟನೆ

ವಿಬಿ-ಜಿ ರಾಮಜಿ ಯೋಜನೆಯಡಿ ಉದ್ಯೋಗ ನೀಡುವಂತೆ ತಾಪಂ ಎದುರು ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಶ್ವೇಶ್ವರಯ್ಯ  ಹಿರೇಮಠ, ರೇಣುಕಾ ಭಂಡಾರಿ, ವನಿತಾ ಪಾಟೀಲ ಇತರರಿದ್ದರು.
ವಿಬಿ-ಜಿ ರಾಮಜಿ ಯೋಜನೆಯಡಿ ಉದ್ಯೋಗ ನೀಡುವಂತೆ ತಾಪಂ ಎದುರು ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಶ್ವೇಶ್ವರಯ್ಯ ಹಿರೇಮಠ, ರೇಣುಕಾ ಭಂಡಾರಿ, ವನಿತಾ ಪಾಟೀಲ ಇತರರಿದ್ದರು.
Published on

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿಬಿ-ಜಿ ರಾಮಜಿ ಯೋಜನೆಯಡಿ ಕೂಲಿಗೆ ಅರ್ಜಿ ಸಲ್ಲಿಸಿದರೂ ಕೆಲಸ ನೀಡಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿ ತಾಪಂ ಇಒ ಟಿ.ಆರ್.ಮಲ್ಲಾಡದಗೆ ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತ ವಿಶ್ವೇಶ್ವರಯ್ಯ ಹಿರೇಮಠ ಮಾತನಾಡಿ, ತಾಲೂಕಿನ ಕೆಲ ಗ್ರಾಪಂ ಅಧಿಕಾರಿಗಳು ವಿಬಿ-ಜಿ ರಾಮಜಿ ಯೋಜನೆಯಡಿ ಉದ್ಯೋಗ ಕೈಗೆತ್ತಿಕೊಳ್ಳುತ್ತಿಲ್ಲ. ಇದರಿಂದ ಕೂಲಿ ಕಾರ್ಮಿಕರಿಗೆ ಬದುಕಿನ ಚಿಂತೆ ಕಾಡುತ್ತಿದೆ. ಜುಲೈ 27ರಂದು ಮಣಗುತ್ತಿ ಗ್ರಾಮ ಪಂಚಾಯಿತಿಯಲ್ಲಿ 30 ದಿನಗಳ ಕೆಲಸ ಕೇಳಿ ಅರ್ಜಿ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಕೆಲಸ ಕೊಟ್ಟಿಲ್ಲ. ತಾಪಂ ಇಒ ಶೀಘ್ರ ಕೆಲಸ ಕೊಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಪಂ ಇಒ ಟಿ.ಆರ್.ಮಲ್ಲಾಡದ ಮಾತನಾಡಿ, ವಿಬಿ-ಜಿ ರಾಮಜಿ ಯೋಜನೆಯಡಿ ಕೆಲಸ ನೀಡುವಂತೆ ಮಣಗುತ್ತಿ ಪಿಡಿಒಗೆ ಹೇಳುತ್ತೇನೆ. ಎಲ್ಲ ಗ್ರಾಪಂಗಳಲ್ಲೂ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು. ಬಳಿಕ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ರೇಣುಕಾ ಭಂಡಾರಿ, ವನಿತಾ ಪಾಟೀಲ, ಲತಾ ಮಾಂಡೇಕರ, ಸವಿತಾ ದುರ್ಗಾಯಿ, ಕೌಶಲ್ಯಾ ಝಿರಳಿ, ಲಕ್ಷ್ಮೀ ಪಾಟೀಲ, ಸಿಂಧೂ ಶಿಂಧೆ, ದಾಕ್ಷಾಯಿಣಿ ಕೊಂಕಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net