ಅಥಣಿ ಜಿಲ್ಲೆಗೆ ಆಗ್ರಹಿಸಿ ಪ್ರತಿಭಟನೆ

ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಹಾಗೂ ತೆಲಸಂಗ ಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ತೆಲಸಂಗ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಶ್ರೀಶೈಲ ಶೆಲ್ಲೆಪ್ಪಗೋಳ, ಧರಿಯಪ್ಪ ಮಾಳಿ ಇತರರಿದ್ದರು.
ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಹಾಗೂ ತೆಲಸಂಗ ಗ್ರಾಮವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ತೆಲಸಂಗ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಶ್ರೀಶೈಲ ಶೆಲ್ಲೆಪ್ಪಗೋಳ, ಧರಿಯಪ್ಪ ಮಾಳಿ ಇತರರಿದ್ದರು.
Published on
ಅಥಣಿ ಬೆಳಗಾವಿಯಿಂದ 185 ಕಿಮೀ ಅಂತರವಿದ್ದು, ಅಭಿವೃದ್ಧಿಗೆ ತೊಡಕಾಗಿದೆ. ಕೇವಲ 45 ಕಿಮೀ ದೂರದ ವಿಜಯಪುರ ಜಿಲ್ಲೆಗೆ ಅಥಣಿಯನ್ನು ಸೇರಿಸಬೇಕು. ದೊಡ್ಡ ಜಿಲ್ಲೆಗಳನ್ನು ವಿಭಜನೆ ಮಾಡದೆ ಇರುವುದು ಉತ್ತರ ಕರ್ನಾಟಕದ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಒಂದು ವೇಳೆ ಗೋಕಾಕ ಜಿಲ್ಲೆ ಮಾಡುವುದೇ ಆದಲ್ಲಿ ತೆಲಸಂಗ ಗ್ರಾಮವನ್ನು 42 ಕಿಮೀ ಅಂತರದ ವಿಜಯಪುರ ಜಿಲ್ಲೆಗೆ ಸೇರಿಸಬೇಕು. ಯಾರ ಪ್ರಭಾವಕ್ಕೆ ಒಳಗಾಗದೆ, ನ್ಯಾಯಯುತವಾಗಿ ಜಿಲ್ಲಾ ಕೇಂದ್ರ ಘೋಷಣೆ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತೆಲಸಂಗ ಹೋರಾಟ ಸಮಿತಿ ಅಧ್ಯಕ್ಷ ಶ್ರೀಶೈಲ ಶೆಲ್ಲೆಪ್ಪಗೋಳ, ಧರಿಯಪ್ಪ ಮಾಳಿ, ಲಕ್ಕಪ್ಪ ನಾಟಿಕರ, ಸುನೀಲ ಉಂಡೋಡಿ, ರಘು ಉಂಡೋಡಿ, ಸಹದೇವ ದಶವಂತ, ಸಿದ್ಧಲಿಂಗ ಮಾದರ, ಶ್ರವಣ ಸೂರ್ಯವಂಶಿ, ಸುನೀಲ ಮಾದರ, ಆನಂದ ತೈಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net