ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಕರ್ತವ್ಯ

ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನಾಮದೇವ ಸಾಲಮಂಟಪಿ ಉದ್ಘಾಟಿಸಿದರು. ಎನ್.ಎಸ್.ಬಾಗಿ, ಗಿರಿಮಲ್ಲಪ್ಪ ಉಪ್ಪಾರ, ಎಲ್.ಎಸ್.ಕಾಳೆ, ಎನ್.ಎಸ್.ಉಗಾರೆ, ಬಿಇಒ ಮಲ್ಲಪ್ಪ ಮುಂಜೆ ಇತರರಿದ್ದರು.
ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ನಾಮದೇವ ಸಾಲಮಂಟಪಿ ಉದ್ಘಾಟಿಸಿದರು. ಎನ್.ಎಸ್.ಬಾಗಿ, ಗಿರಿಮಲ್ಲಪ್ಪ ಉಪ್ಪಾರ, ಎಲ್.ಎಸ್.ಕಾಳೆ, ಎನ್.ಎಸ್.ಉಗಾರೆ, ಬಿಇಒ ಮಲ್ಲಪ್ಪ ಮುಂಜೆ ಇತರರಿದ್ದರು.
Published on
ಅಥಣಿ ಗ್ರಾಮೀಣ: ಶಾಲೆಗೆ ತೆರಳಿ ಅಕ್ಷರ ಜ್ಞಾನ ಪಡೆಯುವುದು ಪ್ರತಿ ಮಗುವಿನ ಹಕ್ಕು, ಅದನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಹೇಳಿದರು.
ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಮಕ್ಕಳ ಸುರಕ್ಷತೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯವಿವಾಹ ಮಾಡುವುದು ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸರಿಗೆ ಇಲ್ಲವೇ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು. ಪೋಕ್ಸೋ ಪ್ರಕರಣ ಹೆಚ್ಚುತ್ತಿದ್ದು, ವಿದ್ಯಾರ್ಥಿನಿಯರು ಎಚ್ಚರಿಕೆಯಿಂದ ಇರಬೇಕು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬಾಗಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಬೇಕು ಎಂದರು.
ವಕೀಲ ಎಲ್.ಎಸ್.ಕಾಳೆ, ಅಥಣಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿದರು. ಮುಖ್ಯಶಿಕ್ಷಕ ಎನ್.ಎಸ್.ಉಗಾರೆ, ಬಿಇಒ ಮಲ್ಲಪ್ಪ ಮುಂಜೆ, ಎಂ.ಎಸ್.ಪಾಟೀಲ, ಡಾ.ಪ್ರವೀಣ ದಬಾಡಿ, ಎಸ್‌ಡಿಎಂಸಿ ಅಧ್ಯಕ್ಷ ಭೀಮಪ್ಪ ಮುರಗುಂಡಿ, ಸಂಜೀವ ಮೆಂಡಿಗೇರಿ, ಸದಾಶಿವ ಶಿವಪುರ, ಅನಿಲ ಕುಂಬಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net