ನೀರು ಸದ್ಬಳಕೆ ಪ್ರತಿಯೊಬ್ಬರ ಜವಾಬ್ದಾರಿ

ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸತೀಶ ಹೂಲಿ, ಡಾ.ದರ್ಶನಕುಮಾರ ಬಿಳ್ಳೂರ, ಪ್ರೊ.ಸುನೀಲ ಹೆಬ್ಬಾಳೆ, ಡಾ.ಸಂಜಯ ಅಂಕಲಿ ಇದ್ದರು.
ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸತೀಶ ಹೂಲಿ, ಡಾ.ದರ್ಶನಕುಮಾರ ಬಿಳ್ಳೂರ, ಪ್ರೊ.ಸುನೀಲ ಹೆಬ್ಬಾಳೆ, ಡಾ.ಸಂಜಯ ಅಂಕಲಿ ಇದ್ದರು.
Published on
ಚಿಕ್ಕೋಡಿ: ನೀರಿನ್ನು ಅನವಶ್ಯಕವಾಗಿ ವ್ಯರ್ಥ ಮಾಡದೇ, ಸದ್ಬಳಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ಪೀಳಿಗೆಗೆ ಆರೋಗ್ಯಯುತ, ಸ್ವಚ್ಛ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಏಕಸ್ ಏರೋಸ್ಟ್ರಕ್ಚರ್ ಪ್ರೈ.ಲಿ ಇಎಚ್‌ಎಸ್ ವಿಭಾಗದ ಮ್ಯಾನೇಜರ್ ಡಾ.ಸತೀಶ ಹೂಲಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಇಂಡಿಯನ್ ಕಾಂಕ್ರಿಟ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನೀಕರಣದ ಬೆನ್ನಟ್ಟಿ ಗಿಡಮರಗಳನ್ನು ನಾಶಮಾಡುತ್ತಿದ್ದೇವೆ. ಕೈಗಾರಿಕಾ ತ್ಯಾಜ್ಯ ನದಿಗಳಿಗೆ ಸೇರುತ್ತಿದ್ದು, ಅದನ್ನು ನಿಲ್ಲಿಸಬೇಕಾಗಿದೆ ಎಂದರು.
ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಮಾತನಾಡಿ, ಮಹಾವಿದ್ಯಾಲಯದಲ್ಲಿ ಜಲ ಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು, ಹನಿ ನೀರಾವರಿ ಪದ್ಧತಿ, ಮಲಿನ ನೀರು ಶುದ್ಧೀಕರಣ ಘಟಕ ಅಳವಡಿಸಿದ್ದು, ಆವರಣದಲ್ಲಿ ಹಚ್ಚ-ಹಸಿರಾದ ಉದ್ಯಾನ ನಿರ್ಮಾಣ ಮಾಡಿದ್ದೇವೆ. ತಾಂತ್ರಿಕ ವಿದ್ಯಾರ್ಥಿಗಳು ನೀರಿನ ಹಾಗೂ ಪರಿಸರ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಮಾಡುವ ಮೂಲಕ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ ಎಂದರು.
ಪ್ರೊ.ಸುನೀಲ ಹೆಬ್ಬಾಳೆ, ಡಾ.ಸಂಜಯ ಅಂಕಲಿ, ಡಾ.ವೀರಣ್ಣ ಮೋದಿ, ಡಾ.ಲಕ್ಷ್ಮಣ ಅಂಬಿ, ಪ್ರೊ.ವಿವೇಕ ಪಾಟೀಲ, ಪ್ರೊ.ಬಾಳಪ್ಪ ನವಲಾಯಿ, ಪ್ರೊ.ವಿದ್ಯಾ ಅಂಗಡಿ, ಪ್ರೊ.ಪ್ರದೀಪ ಹೊದ್ಲೂರ, ಪ್ರೊ.ಶಂಕರಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net