ಗುರುವಿನ ಆಶೀರ್ವಾದದಿಂದ ಉನ್ನತಿ ಸಾಧ್ಯ

ಕೊಕಟನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಯತೀಶ್ವರಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಅನಿಲ ಮೇಲಿಕೇರಿ, ಆರ್ೀ ಬಿರಾದಾರ, ಶ್ಯಾಮರಾವ್ ಪೂಜಾರಿ, ಸೋಮಶೇಖರ ಶರಣ ಇತರರಿದ್ದರು.
ಕೊಕಟನೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಯತೀಶ್ವರಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಅನಿಲ ಮೇಲಿಕೇರಿ, ಆರ್ೀ ಬಿರಾದಾರ, ಶ್ಯಾಮರಾವ್ ಪೂಜಾರಿ, ಸೋಮಶೇಖರ ಶರಣ ಇತರರಿದ್ದರು.
Published on
ಅಥಣಿ ಗ್ರಾಮೀಣ: ಗುರಿ, ಛಲ, ಗುರುವಿನ ಆಶೀರ್ವಾದ ಇದ್ದಾಗ ಮಾತ್ರ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2001-2002ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಶನಿವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣ, ಪ್ರಮಾಣ ಪತ್ರಕ್ಕೆ ಸೀಮಿತವಾಗಿದ್ದರಿಂದ ಮಕ್ಕಳಲ್ಲಿ ವಿನಯ ದೂರವಾಗುತ್ತಿದೆ. ಪಾಲಕರನ್ನು ವೃದ್ಧಾಶ್ರಮದಲ್ಲಿ ಇಡದೇ ಸುತ್ತಮುತ್ತಲಿನ ಜನರೊಂದಿಗೆ ಪ್ರೀತಿಯಿಂದ ನಡೆದು ಸಮಾಜಕ್ಕೆ ಒಳ್ಳೆಯ ಕಾರ್ಯ ಮಾಡಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂದು ತಿಳಿಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿ ಪೃಥ್ವಿರಾಜ ಚೌಹಾಣ, ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಲ್.ಭಜಂತ್ರಿ ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳು ಶಾಲೆಗೆ 2.5 ಲಕ್ಷ ರೂ. ಮೊತ್ತದ ಸ್ಮಾರ್ಟ್ ಬೋರ್ಡ್ ದೇಣಿಗೆ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾರ್ಥನಾ ಬಿರಾದಾರಪಾಟೀಲ, ಶೇ.90ಕ್ಕಿಂತ ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಅನಿಲ ಮೇಲಿಕೇರಿ ಉದ್ಘಾಟಿಸಿದರು. ಅದ್ವೈತಾನಂದ ಸ್ವಾಮೀಜಿ, ಮುಖಂಡರಾದ ಗುರುಮೂರ್ತಯ್ಯ ಕಾಡದೇವರಮಠ, ಅಪ್ಪಾಸಾಹೇಬ ಅವತಾಡೆ, ಅಮಿತ ದೇಸಾಯಿ, ಬಿ.ಎಂ.ಟೊನಪೆ, ಎಂ.ಆರ್.ಹಲಗಿ, ಸಿ.ವಿ.ಅಡಿವೆರ, ವಿ.ಎಸ್.ಪಡತಾರೆ, ಆರ್.ಬಿ.ಮೈಶಾಳೆ, ಬಿ.ಬಿ.ನಂದಗಾಂವ, ವಕೀಲ ಪವನ ಶೇಡಬಾಳ, ಆರ್.ಜೆ.ಮಾನಗಾಂವೆ ಇತರರು ಇದ್ದರು. ಸೋಮಶೇಖರ ಶರಣ ಸ್ವಾಗತಿಸಿದರು. ಜಾವೇದ್ ಮೋಮಿನ್ ನಿರೂಪಿಸಿದರು. ಅನಿಲ ಚೌಹಾಣ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net