ಉತ್ತರ ಕರ್ನಾಟಕದ ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು

ಬೆಳಗಾವಿಯ ಹಿರೇಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪೂಜಾ ಪದ್ಧತಿ ಕೈಪಿಡಿಯನ್ನು ಹನುಮಂತನಾಥ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಮನೋಹರ ಮಠಜಿ ಇತರರು ಬಿಡುಗಡೆಗೊಳಿಸಿದರು.
ಬೆಳಗಾವಿಯ ಹಿರೇಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪೂಜಾ ಪದ್ಧತಿ ಕೈಪಿಡಿಯನ್ನು ಹನುಮಂತನಾಥ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಮನೋಹರ ಮಠಜಿ ಇತರರು ಬಿಡುಗಡೆಗೊಳಿಸಿದರು.
Published on
ಬೆಳಗಾವಿ : ದಕ್ಷಿಣ ಕರ್ನಾಟಕದ ದೇವಾಲಯಗಳ ಮಾದರಿಯಲ್ಲಿ ಉತ್ತರ ಕರ್ನಾಟಕದ ದೇವಾಲಯಗಳನ್ನೂ ಸ್ವಚ್ಛತೆ, ಶಿಸ್ತುಬದ್ಧ ಪೂಜಾ ಪದ್ಧತಿ ಹಾಗೂ ಭಕ್ತಸೇವೆಯ ಮೂಲಕ ಅಭಿವೃದ್ಧಿಪಡಿಸಬೇಕಿದೆ ಕುಂಚಿಟಿಗರ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದಿಂದ ಲಕ್ಷ್ಮೀ ಟೇಕಡಿ ಹಿರೇಮಠದಲ್ಲಿ ಆಯೋಜಿಸಿರುವ ಎಂಟು ದಿನಗಳ ಅರ್ಚಕರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಈ ಭಾಗದ ದೇವಾಲಯಗಳು ಸುಧಾರಣೆ ಸಹಿತ ಅಭಿವೃದ್ಧಿ ಹೊಂದಬೇಕು. ಮಾದರಿಯಾಗಿ ಜನಮನ್ನಣೆ ಗಳಿಸುವಂತಾಗಬೇಕೆಂಬ ಉದ್ದೇಶದಿಂದ ಅರ್ಚಕರಿಗೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಅರ್ಚಕರು ಪೂಜಾ ವಿಧಾನ, ವೇಷಭೂಷಣ ಹಾಗೂ ಮಂತ್ರೋಚ್ಛಾರಣೆಯಲ್ಲಿ ಶುದ್ಧತೆ ಮತ್ತು ಸ್ಪಷ್ಟತೆ ಕಾಪಾಡಿಕೊಳ್ಳಬೇಕು. ಮಂತ್ರೋಚ್ಛಾರಣೆಯಲ್ಲಿ ದೋಷಗಳು ಉಂಟಾಗದ ರೀತಿ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮನೋಹರ ಮಠಜಿ, ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ, ಉದ್ಯಮಿ ಪಿ.ಎಸ್.ಹಿರೇಮಠ, ವೈದ್ಯರಾದ ಡಾ.ಎಂ.ಬಿ. ಬೆಲ್ಲದ, ಡಾ.ಕೇದಾರೇಶ್ವರ ಇತರರಿದ್ದು.
ಆರಂಭದಲ್ಲಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ಗಂಗಾರತಿ ನೆರವೇರಿಸಿದರು. ಪೂಜಾ ಪದ್ಧತಿ ಕೈಪಿಡಿ ಎಂಬ ಕಿರು ಕೃತಿ ಬಿಡುಗಡೆಗೊಳಿಸಲಾಯಿತು. ಬಸವರಾಜ ಬಾಗುಜಿ ನಿರೂಪಿಸಿದರು. ವಿಜಯ ಜಾಧವ ಪ್ರಾರ್ತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net