ದೇಸಿ ಕ್ರೀಡೆಗೆ ಆದ್ಯತೆ ಅಗತ್ಯ

ಕೊಕಟನೂರ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶ್ಯಾಮರಾವ ಪೂಜಾರಿ, ಸಿದರಾಯ ಯಲಡಗಿ, ರಾಹುಲ ಪೂಜಾರಿ, ಸುರೇಶ ಪೂಜಾರಿ ಇತರರಿದ್ದರು.
ಕೊಕಟನೂರ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಶ್ಯಾಮರಾವ ಪೂಜಾರಿ, ಸಿದರಾಯ ಯಲಡಗಿ, ರಾಹುಲ ಪೂಜಾರಿ, ಸುರೇಶ ಪೂಜಾರಿ ಇತರರಿದ್ದರು.
Published on
ಅಥಣಿ ಗ್ರಾಮೀಣ: ಕಬಡ್ಡಿ, ಕುಸ್ತಿ ಪೂರ್ವಜರಿಂದ ಬಂದ ಕ್ರೀಡೆಗಳು, ಹೀಗಾಗಿ ಯುವಕರು ವಿದೇಶಿ ಕ್ರೀಡೆಗಳಿಗೆ ಮಾರು ಹೋಗದೆ, ದೇಸಿ ಕ್ರೀಡೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಅವರ ಜನ್ಮದಿನದ ಅಂಗವಾಗಿ ಎಲ್.ಎಸ್.ಗ್ರೂಪ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು. ಕಬಡ್ಡಿ ಇಂದು ಮತ್ತೆ ಪ್ರೋ ಕಬಡ್ಡಿ ಲೀಗ್‌ನಿಂದ ಜಗದ್ವಿಖ್ಯಾತಿ ಪಡೆಯುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ಶ್ಯಾಮರಾವ್ ಪೂಜಾರಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪ್ರಜೆಗಳಾಗಿ, ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು. ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರದ 21 ತಂಡ ಭಾಗವಹಿಸಿದ್ದವು. ಅದರಲ್ಲಿ ಕೊಕಟನೂರ ಕರಿಸಿದ್ಧೇಶ್ವರ ತಂಡ ಪ್ರಥಮ, ಮಹಾರಾಷ್ಟ್ರದ ಸಂಗೋಲಾ ತಂಡ ದ್ವೀತಿಯ, ಕಾಗವಾಡ ತಾಲೂಕಿನ ಐನಾಪುರ ತಂಡ ತತೀಯ ಸ್ಥಾನ ಪಡೆದವು. ಜಿಪಂ ಮಾಜಿ ಸದಸ್ಯ ಸಿದರಾಯ ಯಲಡಗಿ, ರಾಹುಲ ಪೂಜಾರಿ, ಸುರೇಶ ಪೂಜಾರಿ, ಶಂಕರ ಹಿರೇಕುರಬರ, ಅನಿಲ ಮುಳಿಕ, ಸತೀಶ ದೊಡಮನಿ, ಪ್ರಶಾಂತ ಕಾಂಬಳೆ, ಸುಭಾಷ ಸೋನಕರ, ಮಾನಸಿಂಗ ಮಗರ, ರಸುಲ್ ಕಾಳೆ, ಜಿಪಂ ಮಾಜಿ ಸದಸ್ಯ ಪ್ರಲ್ಹಾದ ಪೂಜಾರಿ, ಮುರೆಪ್ಪ ಬಣಜ, ಮಹಾವೀರ ಹಳಕಿ, ಮಹಾವೀರ ವೀರಗೌಡ, ಪ್ರವೀಣ ತುಬಚಿ, ಅಪ್ಪಾಸಾಬ ನಾಯಿಕ, ಬೀರಪ್ಪ ಸನದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net