ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕುಟುಂಬಸ್ಥರನ್ನು ದೇವಸ್ಥಾನದ ಕಾರ್ಯದರ್ಶಿ ಪ್ರಭಾವತಿ ಫಕೀರಪುರ ಶಾಲು ಹೊದಿಸಿ ಸತ್ಕರಿಸಿದರು. ಸಂಗನಬಸಯ್ಯ, ಮಲ್ಲು ಜಕಾತಿ, ಅಲ್ಲಮಪ್ರಭು ಪ್ರಭುನವರ ಇತರರಿದ್ದರು.
ಯಲ್ಲಮ್ಮನಗುಡ್ಡಕ್ಕೆ ಗುರುವಾರ ಭೇಟಿ ನೀಡಿ ಯಲ್ಲಮ್ಮ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಿ, ಭಕ್ತರಿಗೆ ಆಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ಮಗಳು ರೂಹಿ ಜನಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಯಲ್ಲಮ್ಮನ ಸನ್ನಿಧಿಗೆ ಬಂದು ದೇವಿ ದರ್ಶನ ಪಡೆದಿರುವೆ. ಇದೊಂದು ಜಾಗೃತ ಪುಣ್ಯಕ್ಷೇತ್ರವಾಗಿದ್ದು ಇಲ್ಲಿಗೆ ಬರುವ ಭಕ್ತರು ಭಕ್ತಿ, ಶ್ರದ್ಧೆಯಿಂದ ದೇವಿಯಲ್ಲಿ ಬೇಡಿಕೊಂಡು ಪುನೀತರಾಗಬೇಕು ಎಂದರು.