ಜನಪರ ಕೆಲಸ ಕೈಗೊಳ್ಳಲು ಆದ್ಯತೆ

ಬಡಚಿ ಗ್ರಾಮದಲ್ಲಿ ಚಿದಾನಂದ ಸವದಿ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಜೋಡೆತ್ತಿನ ಚಕ್ಕಡಿ ಶರ್ಯತ್ತಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಚಿದಾನಂದ ಸವದಿ, ಮಹಾದೇವ ಬಿಳಿಕುರಿ, ಸುರೇಶ ಗುಳಪ್ಪನವರ, ಶಂಕರ ಗಡದೆ ಇತರರಿದ್ದರು.
ಬಡಚಿ ಗ್ರಾಮದಲ್ಲಿ ಚಿದಾನಂದ ಸವದಿ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಜೋಡೆತ್ತಿನ ಚಕ್ಕಡಿ ಶರ್ಯತ್ತಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ಚಿದಾನಂದ ಸವದಿ, ಮಹಾದೇವ ಬಿಳಿಕುರಿ, ಸುರೇಶ ಗುಳಪ್ಪನವರ, ಶಂಕರ ಗಡದೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಲಕ್ಷ್ಮಣ ಸವದಿ ಸಲಹೆ
  • ಯುವ ಮುಖಂಡ ಚಿದಾನಂದ ಜನ್ಮದಿನ
ಅಥಣಿ ಗ್ರಾಮೀಣ: ಜೀವನವೇ ಒಂದು ಸ್ಪರ್ಧೆ. ಗುರಿ ಸಾಽಸಲು ಓಡಲೇಬೇಕು. ಗಾಡಿ ಎಷ್ಟೇ ಚೆನ್ನಾಗಿ ಓಡಿದರೂ ಚಾಟಿ ಏಟು ತಪ್ಪಿದ್ದಲ್ಲ. ಎಷ್ಟೇ ಪ್ರಾಮಾಣಿಕರಾಗಿದ್ದರೂ ನಿಂದನೆ ತಪ್ಪಿದ್ದಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಚಿದಾನಂದ ಸವದಿ ಅವರ ೪೦ನೇ ಜನ್ಮದಿನದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಜೋಡೆತ್ತಿನ ಚಕ್ಕಡಿ ಶರ್ಯತ್ತು ಉದ್ಘಾಟಿಸಿ ಮಾತನಾಡಿ, ಜನರ ಪ್ರೀತಿ, ವಿಶ್ವಾಸ ಗಳಿಸುವುದು ಹಣದಿಂದಲ್ಲ, ನಾವು ಮಾಡುವ ಕಾರ್ಯದಿಂದ. ಕರಿಮಸೂತಿ, ತುಂಗಳ-ಸಾವಳಗಿ, ಕೊಟ್ಟಲಗಿ ಅಮ್ಮಾಜೇಶ್ವರಿ ಏತನೀರಾವರಿ, ಕೆರೆ ತುಂಬುವ ಯೋಜನೆ ಮೂಲಕ ಜನ ಸೇವೆಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಿಮ್ಮ ಋಣ ತೀರಿಸಲಾಗದಿದ್ದರೂ, ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವೆ. ಅಭಿಮಾನಿಗಳು ಎತ್ತಿನಗಾಡಿ ಶರ್ಯತ್ತು ಏರ್ಪಡಿಸುವ ಮೂಲಕ ನನ್ನ ಮೇಲಿರುವ ಪ್ರೀತಿ ಎತ್ತಿ ತೋರಿಸಿದ್ದೀರಿ. ಸ್ಪರ್ಧೆಯನ್ನು ಸ್ಪರ್ಧಾ ಮನೋಭಾವದಿಂದ ಕಣ್ತುಂಬಿಕೊಳ್ಳಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ಮುಖಂಡ ಚಿದಾನಂದ ಸವದಿ, ಸಮಾಜಮುಖಿ ಕೆಲಸಗಳಿಗೆ ತಂದೆ ಪ್ರೇರಣೆ, ನೀವು ತೋರುತ್ತಿರುವ ಪ್ರೀತಿ ವರ್ಣಿಸಲು ಶಬ್ದಗಳೇ ಸಾಲುತ್ತಿಲ್ಲ. ತಾವು ತೋರಿದ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿ ಎಂದರು.
ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟçದ ೫೦ಕ್ಕೂ ಹೆಚ್ಚು ಜೋಡೆತ್ತುಗಳು ಭಾಗವಹಿಸಿದ್ದವು. ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಸಂಘಗಳ ನಿರ್ದೇಶಕ ಮಹಾದೇವ ಬಿಳಿಕುರಿ, ಸುರೇಶ ಗುಳಪ್ಪನವರ, ಗ್ರಾಪಂ ಅಧ್ಯಕ್ಷ ಶಂಕರ ಗಡದೆ, ಅಮೋಘ ಖೋಬ್ರಿ, ಶಂಕರ ಮುರಗುಂಡಿ, ಶ್ರೀಶೈಲ ನಾಯಿಕ, ಜಡೆಪ್ಪ ಕುಂಬಾರ, ಅಪ್ಪಣ್ಣ ಕಮತಗಿ, ಸುಭಾಷ ಸೋನಕರ ಇತರರಿದ್ದರು.

ಜನಾಶೀರ್ವಾದವೇ ಶ್ರೀರಕ್ಷೆ

ಅಡಹಳಿಯಲ್ಲಿ ಚಿದಾನಂದ ಸವದಿ ೪೦ನೇ ಜನ್ಮದಿನ ಆಚರಿಸಲಾಯಿತು. ಶಿವು ಗುಡ್ಡಾಪುರ, ಪ್ರಕಾಶ ಪೂಜಾರಿ, ಮಹಾದೇವ ಹಿಪ್ಪರಗಿ, ಸೂರ್ಯಕಾಂತ ಡಂಬಳಕರ ಇತರರಿದ್ದರು.
ಅಥಣಿ ಗ್ರಾಮೀಣ: ಹಣ, ಆಸ್ತಿ, ಅಧಿಕಾರಕ್ಕಿಂತ ಜನರ ಪ್ರೀತಿ, ಅಭಿಮಾನ ಶ್ರೇಷ್ಠವಾದುದು. ತಂದೆ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಉಸಿರಿರುವರೆಗೂ ಜನ ಸೇವೆ ಮಾಡುವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ೪೦ನೇ ಜನ್ಮದಿನದ ಪ್ರಯುಕ್ತ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನರ ನೋವು ನಲಿವಿನಲ್ಲಿ ಭಾಗಿಯಾಗುತ್ತೇನೆ. ಕೇತ್ರದ ಜನರ ಆಶೀರ್ವಾದ ನನಗೆ ಶ್ರೀರಕ್ಷೆಯಾಗಿದೆ ಎಂದರು. ಕಾಂಗ್ರೆಸ್ ಯುವಮುಖಂಡ ಶಿವು ಗುಡ್ಡಾಪುರ ಮಾತನಾಡಿ, ಕರೋನಾ, ಪ್ರವಾಹ ಸಂದರ್ಭಗಳಲ್ಲಿ ಕ್ಷೇತ್ರದ ಜನರಿಗೆ ಆಹಾರ ಕಿಟ್ ಒದಗಿಸಲು ತಮ್ಮದೇ ಪಡೆ ಮೂಲಕ ಸಂತ್ರಸ್ತರ ಕಣ್ಣೀರು ಒರೆಸಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ ಎಂದರು.
ಪ್ರಕಾಶ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಹಿಪ್ಪರಗಿ, ಸೂರ್ಯಕಾಂತ ಡಂಬಳಕರ, ಸುನೀಲ ಕೆಂಚಣ್ಣವರ, ಚಿದಾನಂದ ಮಠಪತಿ, ಬಸವಂತ ಗುಡ್ಡಾಪುರ, ಚಿದಾನಂದ ಅಥಣಿ, ಶಿವಾಜಿ ಡಂಬಳಕರ, ಪರಸಪ್ಪ ಅಥಣಿ, ಮೋಹನ ಸೂರ್ಯವಂಶಿ, ಸತ್ಯಪ್ಪ ಸನದಿ, ಶ್ರೀಶೈಲ ಸನದಿ, ಕಲ್ಮೇಶ ಪೂಜಾರಿ, ಅಣ್ಣಪ್ಪ ಹಲ್ಯಾಳ, ಬಸೀರ್ ಅವಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net