ವೈದ್ಯಕೀಯ ಕ್ಷೇತ್ರದಲ್ಲಿ ನಾವಿನ್ಯಕ್ಕೆ ಆದ್ಯತೆ

ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಈಚೆಗೆ ಏರ್ಪಡಿಸಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಅಬ್ದುಲ್ ಸುಲ್ತಾನ್, ಡಾ.ವೀರೇಂದ್ರಕುಮಾರ, ಡಾ.ರಾಣೆ ಥ್ಯಾಕರ್, ಡಾ.ಯಶಿತಾ ಪೂಜಾರ, ಡಾ.ಎಂ.ಬಿ.ಬೆಲ್ಲದ , ಡಾ.ಎಂ.ಸಿ.ಮೆಟಗುಡ್ಡ ಇತರರಿದ್ದರು.
ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಈಚೆಗೆ ಏರ್ಪಡಿಸಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಅಬ್ದುಲ್ ಸುಲ್ತಾನ್, ಡಾ.ವೀರೇಂದ್ರಕುಮಾರ, ಡಾ.ರಾಣೆ ಥ್ಯಾಕರ್, ಡಾ.ಯಶಿತಾ ಪೂಜಾರ, ಡಾ.ಎಂ.ಬಿ.ಬೆಲ್ಲದ , ಡಾ.ಎಂ.ಸಿ.ಮೆಟಗುಡ್ಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ರಾಣೆ ಥ್ಯಾಕರ್ ಅಭಿಪ್ರಾಯ
  • ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ನಾವಿನ್ಯತೆ ಅಳವಡಿಸಿಕೊಂಡು ತಾಯಿ, ಮಕ್ಕಳ ಆರೋಗ್ಯ ಕಾಪಾಡಲು ಯುವಜನಾಂಗ ಕಾರ್ಯಗತವಾಗಬೇಕು ಎಂದು ರಾಯಲ್ ಕಾಲೇಜಿನ ಪ್ರಸೂತಿ ಮತ್ತು ಸೀರೋಗ ವಿಭಾಗದ ಮುಖ್ಯಸ್ಥ ಡಾ.ರಾಣೆ ಥ್ಯಾಕರ್ ಅಭಿಪ್ರಾಯಪಟ್ಟರು.
ಕಾಹೆರ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಆಯೋಜಿಸಿದ್ದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಶ ಪವಾರ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕತಕ ಬುದ್ಧಿಮತ್ತೆ ದಾಪುಗಾಲು ಇಟ್ಟಿದ್ದು, ಅದರಿಂದಲೇ ರೋಗನಿರ್ಣಯ, ಚಿಕಿತ್ಸೆ ಹಾಗೂ ಶಸಚಿಕಿತ್ಸೆ ಸೇರಿ ಎಲ್ಲವೂ ನಡೆಯುತ್ತಿದೆ. ತಂತ್ರಜ್ಞಾನ ಬದಲಾದಂತೆ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ತಜ್ಞ ವೈದ್ಯರಾದ ಡಾ.ಅಬ್ದುಲ್ ಸುಲ್ತಾನ್, ಡಾ.ವೀರೇಂದ್ರಕುಮಾರ ಮಾತನಾಡಿದರು. ೈಬ್ರಾಯ್ಡಾ ವೈದ್ಯಕೀಯ ನಿರ್ವಹಣೆ (ಗರ್ಭಕಂಠ) ಕುರಿತಾಗಿ ಶಿಕ್ಷಣ ಕಾರ್ಯಾಗಾರ ಜರುಗಿತು.
ಪ್ರಸೂತಿ ಮತ್ತು ಸೀರೋಗ ವಿಭಾಗ ಮುಖ್ಯಸ್ಥೆ ಡಾ.ಯಶಿತಾ ಪೂಜಾರ, ಪ್ರಸೂತಿ ಮತ್ತು ಸೀರೋಗ ವೈದ್ಯರ ಸಂಘದ ಅಧ್ಯಕ್ಷ ಡಾ.ಎಂ.ಬಿ.ಬೆಲ್ಲದ , ಡಾ.ಎಂ.ಸಿ.ಮೆಟಗುಡ್ಡ, ಡಾ.ಶ್ರುತಿ ಆಂದೋಲಾ, ಡಾ.ಕಮಲ ಪಾಟೀಲ, ಡಾ.ಅನಿತಾ ದಲಾಲ, ಡಾ.ವನಿತಾ ಮೆಟಗುಡ, ಡಾ.ರಾಜೇಶ್ವರಿ ಕರ್ಪೂರ್, ಡಾ.ವಸಂತ ಕಬ್ಬೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net