ಸ್ಕೂಲ್ ಜಾಗ ಅತಿಕ್ರಮಣ ತಡೆಯಿರಿ

ಹಿರೆಕೋಡಿ ಸರ್ಕಾರಿ ಶಾಲೆ ಅತಿಕ್ರಮಣ ತಡೆಯುವಂತೆ ಆಗ್ರಹಿಸಿ ಕರವೇ ಘಟಕದಿಂದ ಚಿಕ್ಕೋಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಂಜು ಬಡಿಗೇರ, ಸುಭಾಸ ಬಾಳಿಕಾಯಿ, ರಾಜೇಂದ್ರ ಕಾಂಬಳೆ ಇತರರಿದ್ದರು.
ಹಿರೆಕೋಡಿ ಸರ್ಕಾರಿ ಶಾಲೆ ಅತಿಕ್ರಮಣ ತಡೆಯುವಂತೆ ಆಗ್ರಹಿಸಿ ಕರವೇ ಘಟಕದಿಂದ ಚಿಕ್ಕೋಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಂಜು ಬಡಿಗೇರ, ಸುಭಾಸ ಬಾಳಿಕಾಯಿ, ರಾಜೇಂದ್ರ ಕಾಂಬಳೆ ಇತರರಿದ್ದರು.
Published on
ಚಿಕ್ಕೋಡಿ: ತಾಲೂಕಿನ ಹಿರೆಕೋಡಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಜಾಗ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಚಿಕ್ಕೋಡಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರವೇ ಚಿಕ್ಕೋಡಿ ತಾಲೂಕು ಘಟಕದ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಖಾಸಗಿ ವ್ಯಕ್ತಿಗಳು ಹಿರೆಕೋಡಿ ಸರ್ಕಾರಿ ಶಾಲೆಯ ಜಾಗೆಯಲ್ಲಿ ರಸ್ತೆ ನಿರ್ಮಿಸಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಶೀಘ್ರ ಕಾಮಗಾರಿ ತಡೆದು ಶಾಲೆ ಆಸ್ತಿ ರಕ್ಷಿಸಬೇಕು ಎಂದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಶಾಲೆ ಆಸ್ತಿ ಉಳಿವಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸುಭಾಸ ಬಾಳಿಕಾಯಿ, ರಾಜೇಂದ್ರ ಕಾಂಬಳೆ, ರಜನಿಕಾಂತ ಬಡಿಗೇರ, ಮೋಷಿನ್ ಪಟೇಲ, ರಶೀದ್ ಮಕಾನದಾರ್, ರಫೀಕ್ ಪಠಾಣ, ರಮೇಶ ಡಂಗೇರ, ಅಮೂಲ ನಾವಿ, ಪಾರೀಶ ಬಾಳಿಕಾಯಿ, ಶಂಕರ ಚೌಗಲಾ, ಚಿದಾನಂದ ಚೌಗಲಾ, ಸಾತ್ವಿರ ಕಟ್ಟಿ, ಸುರೇಶ ಪೂಜಾರಿ, ಅಣ್ಣಪ್ಪ ಪೂಜಾರಿ, ಸಾಗರ ನಿಂಗಾಗೋಳ, ಸುರೇಶ ಫರಿತೆ, ಚನ್ನಪ್ಪ ಮಂಟೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net