ಸಂಭಾವ್ಯ ಪ್ರವಾಹ ಎದುರಿಸಲು ಸಿದ್ಧರಾಗಿ

ಅತಿವೃಷ್ಟಿ ಮತ್ತು ಪ್ರವಾಹ ನಿರ್ವಹಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ರವೀಂದ್ರ ಹಾದಿಮನಿ ಮಾತನಾಡಿದರು. ರಶ್ಮಿ ಜಕಾತೆ, ಡಾ.ಪುಷ್ಪಲತಾ ಸುಣ್ಣದಕಲ್ಲ ಇತರರಿದ್ದರು.
ಅತಿವೃಷ್ಟಿ ಮತ್ತು ಪ್ರವಾಹ ನಿರ್ವಹಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ರವೀಂದ್ರ ಹಾದಿಮನಿ ಮಾತನಾಡಿದರು. ರಶ್ಮಿ ಜಕಾತೆ, ಡಾ.ಪುಷ್ಪಲತಾ ಸುಣ್ಣದಕಲ್ಲ ಇತರರಿದ್ದರು.
Published on
ಕಾಗವಾಡ: ಒಟ್ಟು 14 ಗ್ರಾಮಗಳ ಪೈಕಿ 8 ಗ್ರಾಮಗಳು ಪೂರ್ಣ ಹಾಗೂ 5 ಗ್ರಾಮಗಳು ಭಾಗಶಃ ಪ್ರವಾಹದಿಂದ ಹಾನಿಗೊಳಗಾಗುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು ಎಂದು ತಹಸೀಲ್ದಾರ್ ರವೀಂದ್ರ ಹಾದಿಮನಿ ಹೇಳಿದ್ದಾರೆ.
ವಿದ್ಯಾಸಾಗರ ಸಭಾಭವನದಲ್ಲಿ ತಾಪಂ ಇಒ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿ, ತಾಲೂಕಾಡಳಿತ 2005, 2019 ಮತ್ತು 2021ರಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದು, ಅತಿವೃಷ್ಟಿಯಿಂದ ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುವ ನೀರಿನ ಪ್ರಮಾಣದ ಮೇಲೆ ನಿಗಾವಹಿಸಬೇಕು. ತಾಲೂಕಿನ ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರೇಡ್-2 ತಹಸೀಲ್ದಾರ್ ರಶ್ಮಿ ಜಕಾತೆ, ಡಾ.ಪುಷ್ಪಲತಾ ಸುಣ್ಣದಕಲ್ಲ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ, ಕೃಷಿ ಅಧಿಕಾರಿ ಕಾಂತಿನಾಥ ಬಿರಾದಾರ, ಸಿಡಿಪಿಒ ರವೀಂದ್ರ ಗುದಗೆನ್ನವರ, ಪಿಎಸ್‌ಐ ರಾಘವೇಂದ್ರ ಖೋತ, ತಾಲೂಕ ನೋಡಲ್ ಅಧಿಕಾರ ಸಹದೇವ ಯರಗೊಪ್ಪ, ಮಲ್ಲಿಕಾರ್ಜುನ ಮಗದುಮ್ಮ, ಪಶು ವೈದ್ಯಾಧಿಕಾರಿ ಡಿ.ಜೆ.ಕಾಂಬಳೆ, ತೋಟಗಾರಿಕೆ ಇಲಾಖೆಯ ರೇಖಾ ಹಳ್ಳೂರ, ಪ್ರವೀಣ ಸೂರ್ಯವಂಶಿ, ಅಲೋಕ ದಿನಕನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net