ಬೈಲಹೊಂಗಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪೂಜೆ

ಬೈಲಹೊಂಗಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ದಿನವೀಡಿ ಭಕ್ತರು ಭಜನೆ ಮಾಡಿದರು. ಮಲ್ಲಿಕಾರ್ಜುನ ಬೋಳಣ್ಣವರ, ಪಾಂಡಪ್ಪ ಇಂಚಲ ಇತರರಿದ್ದರು.
ಬೈಲಹೊಂಗಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ದಿನವೀಡಿ ಭಕ್ತರು ಭಜನೆ ಮಾಡಿದರು. ಮಲ್ಲಿಕಾರ್ಜುನ ಬೋಳಣ್ಣವರ, ಪಾಂಡಪ್ಪ ಇಂಚಲ ಇತರರಿದ್ದರು.
Published on
ಬೈಲಹೊಂಗಲ: ದೊಡ್ಡಾದೇವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಮಳೆಗಾಗಿ ಭಜನಾ ಮಂಡಳಿ ವತಿಯಿಂದ ಮಳೆಗಾಗಿ ಪ್ರಾರ್ಥಿಸಿ ಗುರುವಾರ ದಿನವೀಡಿ ನಿಂತುಕೊಂಡೇ ಭಜನೆ ಮಾಡಲಾಯಿತು.
ಬೆಳಗ್ಗೆ 6 ಗಂಟೆಗೆ ದೊಡ್ಡಾದೇವರಿಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 8 ಗಂಟೆಗೆ ಲೋಕ ಕಲ್ಯಾಣಾರ್ಥ ಹೋಮ-ಹವನ ಜರುಗಿತು. ಬಳಿಕ ಮಹಾಪ್ರಸಾದ ಜರುಗಿತು.
ಮಹಾಂತಯ್ಯಶಾಸಿ ತೆಗ್ಗಿನಮಠ ಮಾತನಾಡಿ, ನಿತ್ಯ ಶಿವನಾಮ ಸ್ಮರಣೆ ಮಾಡುವುದರಿಂದ ಕಷ್ಟ-ಕಾರ್ಪಣ್ಯ ದೂರಾಗುತ್ತವೆ. ಮಠ-ಮಂದಿರಗಳಲ್ಲಿ ನಡೆಯುವ ಹೋಮ-ಹವನ, ಭಜನೆ, ಮಂತ್ರ ಪಠಣ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಮಾಜಿ ಸದಸ್ಯ ಕುಮಾರಗೌಡ ಪಾಟೀಲ, ಸಂಜಯಶಾಸಿ ಪತ್ರಿಮಠ, ಶ್ರೀಕಾರಶಾಸಿ ತೆಗ್ಗಿನಮಠ, ಮುಖಂಡರಾದ ಮಲ್ಲಿಕಾರ್ಜುನ ಬೋಳಣ್ಣವರ, ಪಾಂಡಪ್ಪ ಇಂಚಲ, ಶಿವಪ್ಪ ಲಿಂಬೆಣ್ಣವರ, ವಕೀಲ ರಮೇಶ ನಾಶಿಪುಡಿ, ಬಸಪ್ಪ ಜಂಬಗಿ, ಶ್ರೀಕಾಂತ ಮತ್ತಿಕೊಪ್ಪ, ಅದೃಶ್ಯ ಹುಚ್ಚನವರ, ಮಹಾಂತೇಶ ಮಲ್ಲಾಪುರ, ಉಳವಪ್ಪ ಹಲಕಿ, ಭೀಮಪ್ಪ ಬೆಂಡಿಗೇರಿ, ಈರಪ್ಪ ಪಿರಗೋಜಿ, ರವಿ ಪಿರಗೋಜಿ, ಮಲಕಾಜಪ್ಪ ಗೂಳನ್ನವರ, ಹಣಮಂತ ಹುಡೇದ, ನಾಗೇಶ ಕೋಟಗಿ, ನಾಗಪ್ಪ ದಿನ್ನಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net