ಪ್ರಗತಿಯತ್ತ ಜಿನ್ನಪ್ಪಣ್ಣ ಚೌಗುಲೆ ಸೊಸೈಟಿ

ಶಿರಗುಪ್ಪಿಯ ಜಿನ್ನಪ್ಪಣ್ಣ ಚೌಗುಲೆ ಲಾಲಬಹಾದ್ದೂರ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅಧ್ಯಕ್ಷ ಭಮಣ್ಣ ಚೌಗುಲೆ ಮಾತನಾಡಿದರು. ವಿದ್ಯಾಧರ ಚೌಗುಲೆ, ಮಹಾವೀರ ಕಾತ್ರಾಳೆ ಇತರರಿದ್ದರು.
ಶಿರಗುಪ್ಪಿಯ ಜಿನ್ನಪ್ಪಣ್ಣ ಚೌಗುಲೆ ಲಾಲಬಹಾದ್ದೂರ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅಧ್ಯಕ್ಷ ಭಮಣ್ಣ ಚೌಗುಲೆ ಮಾತನಾಡಿದರು. ವಿದ್ಯಾಧರ ಚೌಗುಲೆ, ಮಹಾವೀರ ಕಾತ್ರಾಳೆ ಇತರರಿದ್ದರು.
Published on
ಕಾಗವಾಡ: ಜಿನ್ನಪ್ಪಣ್ಣ ಚೌಗುಲೆ ಲಾಲಬಹಾದ್ದೂರ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 2.11 ಕೋಟಿ ರೂ. ನಿವ್ವಳ ಲಾಭಗಳಿಸಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ಅಧ್ಯಕ್ಷ ಭಮ್ಮಣ್ಣ್ಣ ಚೌಗುಲೆ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿರುವ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿ.ಜಿನ್ನಪ್ಪಣ್ಣ ಚೌಗುಲೆ ದೂರದಷ್ಟಿ ಫಲವಾಗಿ ಗ್ರಾಮೀಣ ಭಾಗದ ಆರ್ಥಿಕ ಪ್ರಗತಿ ಕನಸು ನನಸಾಗುತ್ತಿದೆ. ಕಾಗವಾಡ, ಅಥಣಿ, ಚಿಕ್ಕೋಡಿ, ರಾಯಬಾಗ ಮತ್ತು ಜಮಖಂಡಿ ತಾಲೂಕಿನಲ್ಲಿ ಸಹಕಾರ ಸಂಘ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಪ್ರಸಕ್ತ ಶಿರಗುಪ್ಪಿ, ಮೋಳೆ, ಅಥಣಿ, ಇಂಗಳಿ, ಐನಾಪುರ, ಶೇಡಬಾಳ, ಚಿಂಚಲಿ, ಉಗಾರಖುರ್ದ, ಕಾಗವಾಡ, ಕಟಕಬಾವಿ, ತೇರದಾಳ, ಗುಂಡೇವಾಡಿ ಸೇರಿ ಒಟ್ಟು 12 ಶಾಖೆ ಹೊಂದಿದೆ ಎಂದರು.
ಸಿಇಒ ವಿದ್ಯಾಧರ ಚೌಗುಲೆ ಮಾತನಾಡಿ, ಸಹಕಾರ ಸಂಘ ಒಟ್ಟು 167 ಕೋಟಿ ರೂ. ಠೇವು ಸಂಗ್ರಹಿಸಿ, 93 ಕೋಟಿ ರೂ. ಸಾಲ ವಿತರಿಸಿದೆ. 84 ಕೋಟಿ ರೂ. ಗುಂತಾವಣೆಗಳಿದ್ದು, 16.5 ಕೋಟಿ ರೂ. ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಸಹಕಾರ ಸಂಘದ ಉಪಾಧ್ಯಕ್ಷೆ ಶಾಲನ ಪಾಟೀಲ, ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ, ನಿರ್ದೇಶಕರಾದ ಭಾವುಸಾಬ ಕುರಂದವಾಡೆ, ಸುರೇಶ ಚೌಗುಲೆ, ಅಪ್ಪಾಸಾಹೇಬ ಶಿರಗುಪ್ಪೆ, ಮಹಾವೀರ ಅಕಿವಾಟೆ, ಸಲಹೆಗಾರರಾದ ಅಜಿತ್ ನಾಂದಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net