ಅಧಿಕಾರ ಶಾಶ್ವತವಲ್ಲ, ಅವಕಾಶ ಸದ್ಬಳಕೆ ಮಾಡಿಕೊಳ್ಳಲಿ

 ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ ಹೇಳಿಕೆ  ದೇವರ ದಾಸಿಮಯ್ಯನವರ ಜಯಂತ್ಯುತ್ಸವ ರಾಮದುರ್ಗ ನಗರದಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಗಣ್ಯರು ಉದ್ಘಾಟಿಸಿದರು. ಪ್ರೀತಿ ಕಾಮಕರ, ನಿವೇದಿತಾ ಡಿ.ಪಿ., ಸಂಜಯ ಖಾತೇದಾರ ಇತರರಿದ್ದರು.
ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ ಹೇಳಿಕೆ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ರಾಮದುರ್ಗ ನಗರದಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಗಣ್ಯರು ಉದ್ಘಾಟಿಸಿದರು. ಪ್ರೀತಿ ಕಾಮಕರ, ನಿವೇದಿತಾ ಡಿ.ಪಿ., ಸಂಜಯ ಖಾತೇದಾರ ಇತರರಿದ್ದರು.
Published on
ರಾಮದುರ್ಗ: ಅಧಿಕಾರ ಶಾಶ್ವತ ಅಲ್ಲ. ಸಿಕ್ಕ ಅವಕಾಶ ಬಳಸಿಕೊಂಡು ಸಮಾಜ ಸಂಘಟನೆ ಹಾಗೂ ಜನಪರ ಯೋಜನೆ ಜಾರಿಗೆ ತಂದು ಸಮಾಜದ ಋಣ ತೀರಿಸಲು ಬದ್ಧ ಎಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ವಿನಾಯಕ ಕಾಮಕರ ಹೇಳಿದರು.
ನಗರದ ರಾಧಾಪುರ ಪೇಟೆಯಲ್ಲಿ ತಾಲೂಕು ಆಡಳಿತ, ದೇವಾಂಗ ಹಾಗೂ ನೇಕಾರ ಸಮುದಾಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1047ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ನೇಕಾರಿಕೆ ವೃತ್ತಿ ಹೆಚ್ಚು ಪ್ರಾಮುಖ್ಯ ಪಡೆದಿದೆ. ಜಿಲ್ಲೆಯ ನೇಕಾರರ ಸೀರೆಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಅವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ನಾಗನೂರ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ ಡಿ.ಪಿ.ಮಾತನಾಡಿ, ಕನ್ನಡದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯನವರು ಹೆಣ್ಣು-ಗಂಡು, ಮೇಲು-ಕೀಳು ಹಾಗೂ ಜಾತಿ-ಪಂಥ ಲೆಕ್ಕಿಸದೆ ಸಾಮಾಜಿಕ ವ್ಯವಸ್ಥೆಯ ಅನ್ಯಾಯ ಧಿಕ್ಕರಿಸಿ ವಚನಗಳ ಮೂಲಕ ನ್ಯಾಯದ ಪರ ಧ್ವನಿ ಎತ್ತಿದ್ದಾರೆ ಎಂದರು.
ದೇವಾಂಗ ಮಠದ ಶಂಕ್ರಯ್ಯಸ್ವಾಮೀಜಿ, ನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ಸಂಜಯ ಖಾತೇದಾರ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಮುರುಡಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯೆ ರೇಷ್ಮಾ ಕಾಮಕರ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಶಿವಾನಂದ ಬಳ್ಳಾರಿ, ದೇವಾಂಗ ಸಮುದಾಯದ ತಾಲೂಕಾಧ್ಯಕ್ಷ ಅಶೋಕ ಸೂಳಿಬಾವಿ, ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕಾಧ್ಯಕ್ಷ ನಾರಾಯಣ ಹೂಲಿ, ಬನಶಂಕರಿ ದೇವಾಂಗ ಸಮುದಾಯದ ಅಧ್ಯಕ್ಷ ಕುಬೇರ ಗರಡಿಮನಿ, ಮುಖಂಡರಾದ ಏಕನಾಥ ಕೊಣ್ಣೂರ, ನೇಮಣ್ಣ ಆರಿ, ಮನೋಹರ ಹೊನ್ನುಂಗರ, ದಾಮೋದರ ರಾಮದುರ್ಗ, ಶ್ರೀಕಾಂತ ಮುಗಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net