

ಪತ್ತೆ ಹೇಗೆ?
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಸ್ಥಾಪಿಸಲಾದ ಭಾರತದ ರಾಷ್ಟ್ರೀಯ ನೋಡಲ್ ಸಂಸ್ಥೆಯಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಈ ಕೇಂದ್ರ ಅತ್ಯಾಧುನಿಕ ಡಿಜಿಟಲ್ ಪುರಾವೆ ಮೂಲಕ ಸಂಶಯಾಸ್ಪದ ಜಾಲತಾಣ ಪತ್ತೆ ಹಚ್ಚುತ್ತದೆ. ಬಳಿಕ ಆಯಾ ಖಾತೆಯ ಐಪಿ ಅಡ್ರೆಸ್‌ನ ಲೋಕೇಷನ್ ಪತ್ತೆ ಹಚ್ಚಲಾಗುತ್ತಿದೆ. ಇದರಡಿ ಅಪರಿಚಿತರ ಹೆಸರಿನಲ್ಲಿ ದೂರು ದಾಖಲಿಸಿಕೊಂಡು, ಸಂಬಂಧಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ.