ಜಿಲ್ಲಾ ಪೊಲೀಸ್ ಮೈದಾನದಿಂದ ಬೆಳಗ್ಗೆ ಆರಂಭಗೊಂಡ 5ಕಿಮೀ ಓಟವು ಆರ್‌ಟಿಒ ವೃತ್ತ, ಅಶೋಕ ಸ್ಥಂಭ ವೃತ್ತ, ಕನಕದಾಸ ವೃತ್ತ, ಶ್ರೀನಗರ ಗಾರ್ಡನ್, ಧರ್ಮನಾಥ ವೃತ್ತದ ಮೂಲಕ ಸಂಚರಿಸಿ ಪುನಃ ಮೈದಾನದಲ್ಲಿ ಮುಕ್ತಾಯವಾಯಿತು. 10ಕಿಮೀ ಓಟ ಕೃಷ್ಣದೇವರಾಯ ವೃತ್ತ, ಸದಾಶಿವ ನಗರ, ಜಾಧವ ನಗರ, ಹನುಮಾನ ನಗರವೃತ್ತ, ಹಿಂಡಲಗಾ ಗಣೇಶ ಮಂದಿರ, ಬಿ.ಶಂಕರಾನಂದ ವೃತ್ತ, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಂಚರಿಸಿತು.