ಒಳಚರಂಡಿ ಅವ್ಯವಸ್ಥೆಗೆ ತತ್ತರಿಸಿದ ಜನತೆ!

ಮಹಾನಗರದಲ್ಲಿ ಎಲ್ಲೆಡೆ ಒಳಚರಂಡಿ ಮಾರ್ಗಗಳು ಸೋರಿಕೆ
ಮಹಾನಗರದಲ್ಲಿ ಎಲ್ಲೆಡೆ ಒಳಚರಂಡಿ ಮಾರ್ಗಗಳು ಸೋರಿಕೆ
Published on
ವಿಜಯವಾಣಿ ವಿಶೇಷ ಬೆಳಗಾವಿ
ಮಹಾನಗರದಲ್ಲಿ ಅಭಿವೃದ್ಧಿ ಕಾಮಗಾರಿ ಚರ್ಚೆಯ ನಡುವೆ ದಶಕಗಳಿಂದ ದುರಸ್ತಿ ಕಾಣದ ಒಳಚರಂಡಿ ಪೈಪ್‌ಲೈನ್ ದುರ್ವ್ಯವಸ್ಥೆಯ ನರಕಕ್ಕೆ ತಳ್ಳಲ್ಪಟ್ಟಿದೆ. ಎಲ್ಲೆಡೆ ಒಳಚರಂಡಿ ಮಾರ್ಗಗಳು ಸೋರಿಕೆಯಾಗುತ್ತಿದ್ದು, ರಸ್ತೆಗಳು ಗಬ್ಬೆದ್ದು ನಾರುತ್ತಿವೆ
ಮಹಾನಗರ ಪಾಲಿಕೆಯ 58 ವಾರ್ಡ್ ವ್ಯಾಪ್ತಿಯಲ್ಲಿ ಶೇ. 40ರಷ್ಟು ಭಾಗದಲ್ಲಿ ಮಾತ್ರ ಒಳಚರಂಡಿ ಮಾರ್ಗ ಒಳಗೊಂಡಿದ್ದು, ಇನ್ನೂಳಿದ ಭಾಗದಲ್ಲಿ ಸೌಲಭ್ಯ ಹೊಂದಿಲ್ಲ.ಹಳೆಯ ಪೈಪ್‌ಲೈನ್‌ಗಳು ಒಡೆದು ಒಳಚರಂಡಿ ನೀರು ನೇರವಾಗಿ ರಸ್ತೆಗಳ ಮೇಲೆ ಹರಿಯುತ್ತಿದೆ. ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಬಡಾವಣೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದ್ದು, ಮನೆ ಶೌಚಗೃಹದ ಮೂಲಕ ಒಳಚರಂಡಿ ನೀರು ವಾಪಸ್ ನುಗ್ಗುತ್ತಿದೆ. ಇದು ಕೇವಲ ಅವ್ಯವಸ್ಥೆಯಲ್ಲ, ನಾಗರಿಕರ ಗೌರವ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ಈಗಾಗಲೇ ಒಳಚರಂಡಿ ಸಮಸ್ಯೆ ಕುರಿತು ನಾಗರಿಕರು ದೂರು ನೀಡಿದರೂ ಪಾಲಿಕೆ ಆಡಳಿತ ಸ್ಪಂದಿಸದೆ ಕಣ್ಣುಮುಚ್ಚಿ ಕುಳಿತಿರುವುದು ಜನರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ನಗರದಲ್ಲಿ ಒಳಚರಂಡಿ ಮಾರ್ಗ ಸಮಸ್ಯೆಗೆ ಶಾಶ್ವತ ಪರಿಹಾರ, ಹೊಸ ಒಳಚರಂಡಿ ಮಾರ್ಗ, ಸಮಗ್ರ ಯೋಜನೆ ಯಾವುದೂ ತಳಮಟ್ಟದಿಂದ ಆಗುತ್ತಿಲ್ಲ. ಕೇವಲ ತಾತ್ಕಾಲಿಕವಾಗಿ ಮಾರ್ಗ ದುರಸ್ತಿ ಕೆಲಸ ನಡೆಯುತ್ತಿದೆ.ಒಳಚರಂಡಿ ಸೋರಿಕೆಯಿಂದ ಡೆಂಗ್ಯೂ, ಮಲೇರಿಯಾ, ಜಾಂಡೀಸ್ ಸೇರಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.
ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ ಪಟ್ಟು ಜನವಸತಿ ಪ್ರದೇಶಗಳ ಪೈಕಿ ಶೇ.40ರಷ್ಟು ಭಾಗದಲ್ಲಿ ಮಾತ್ರ ಒಳಚರಂಡಿ ಸೌಲಭ್ಯ ಒಳಗೊಂಡಿದೆ. ಅದು ಎರಡು ದಶಕದಷ್ಟು ಹಳೆಯ ಪೈಪಲೈನ್ ಮಾರ್ಗ ಹೊಂದಿದೆ. ಹೊಸದಾಗಿ ಒಳಚರಂಡಿ ಮಾರ್ಗ ನಿರ್ಮಾಣಗೊಂಡಿಲ್ಲ. ಅನುದಾನ ಕೊರತೆ, ತಾಂತ್ರಿಕ ಸಮಸ್ಯೆ ಇತರೆ ಕಾರಣಗಳಿಂದಾಗಿ ಹೊಸದಾಗಿ ಒಳಚರಂಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಹಳೆಯ ಒಳಚರಂಡಿ ಜಾಲ ಸಂಪೂರ್ಣವಾಗಿ ಬದಲಾಯಿಸಿ, ಶಾಶ್ವತ ಪರಿಹಾರ ನೀಡದಿದ್ದರೆ ಸಮಸ್ಯೆ ತೀವ್ರರೂಪ ಪಡೆಯಲಿದೆ ಎಂದು ಪಾಲಿಕೆ, ಒಳಚರಂಡಿ ಮಂಡಳಿ ಅಧಿಕಾರಿ, ಇಂಜಿನಿಯರ್ ತಿಳಿಸಿದ್ದಾರೆ.
........
ಕೋಟ್ಸ್
ನಗರದ ಎಲ್ಲ ಜನವಸತಿ ಪ್ರದೇಶ ಒಳಚರಂಡಿ ಸಂಪರ್ಕ ಜಾಲ ಕಲ್ಪಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗಿದೆ. ಅಲ್ಲದೆ,ಹೊಸದಾಗಿ ಒಳಚರಂಡಿ ಮಾರ್ಗ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಾಳಾಗಿರುವ ಚರಂಡಿ ದುರಸ್ತಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಸೂಚನೆ ನೀಡಲಾಗಿದೆ.
- ಮಂಗೇಶ ಪವಾರ್, ಪಾಲಿಕೆ ಮೇಯರ್
...................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net