

ರಾಮದುರ್ಗ: ಸಮರ್ಪಣಾ ಭಾವ ಹಾಗೂ ನಿಸ್ವಾರ್ಥದಿಂದ ಕಾರ್ಯನಿರ್ವಹಿಸಿದಲ್ಲಿ ನೆಮ್ಮದಿಯ ಜೀವನ ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಕೊಡತೆ ಹೇಳಿದರು.
ಖಾಸಗಿ ಸಭಾಭವನದಲ್ಲಿ ಈಚೆಗೆ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ 1994-97ನೇ ಸಾಲಿನ ಬಿ.ಎಸ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಎಸ್.ವಿ.ಹೊನ್ನುಂಗರ ಮಾತನಾಡಿ, ಸಮಾಜದಲ್ಲಿ ಭೇದ-ಭಾವ, ಜಾತಿ, ಮತ, ಪಂಥ ಮರೆತು ಸರ್ವರನ್ನು ಸಮಾನರಾಗಿ ಕಂಡಾಗ ದೇಶದ ಪ್ರತಿ ಸಾಧ್ಯವಿದೆ ಎಂದರು. ನಿವೃತ್ತ ಉಪನ್ಯಾಸಕರಾದ ಜಿ.ಬಿ.ವಡವಡಗಿ, ಬಿ.ಬಿ.ವಂದಾಲ, ಎಸ್.ಪಿ.ಮುರಾರಿ, ಎಂ.ಡಿ.ಅಂಗಡಿ, ವಿಕಾಸ ಉಂಡಾಳೆ, ಶ್ರೀಕಾಂತ ದಂಡನಾಯ್ಕರ, ರಫೀಕ್ ಆಶೇಖಾನ್, ಸುಭಾಸ ಪತ್ತಾರ ಇತರರರಿದ್ದರು.