ಬೈಲಹೊಂಗಲದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಬಸವರಾಜ ಕೌಜಲಗಿ, ಬಾಯಕ್ಕ ಮೇಟಿ ಇತರರು ಇದ್ದರು.
Published on:
Copied
Follow Us
ಕಾಂಗ್ರೆಸ್ ಪಕ್ಷವು ದೇಶದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಂಘಟನೆಯಾಗಿದೆ. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಹಮ್ಮಿಕೊಂಡಿರುವ ಸಂಘಟನಾ ಸಜನ್ ಅಭಿಯಾನಕ್ಕೆ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಕರೆ ನೀಡಿದರು.
ಹೊಸೂರ ರಸ್ತೆಯ ರೋಟರಿ ಕ್ಲಬ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಂಘಟನಾ ಸಜನ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷದ ತತ್ತ್ವ ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸಂಘಟನೆ ಮತ್ತಷ್ಟು ಬಲಗೊಳಿಸಬೇಕಿದೆ ಎಂದರು.
ಎಐಸಿಸಿ ವೀಕ್ಷಕ ಮನೋಜ ಚೌಹಾಣ ಮಾತನಾಡಿ, ಕಾರ್ಯಕರ್ತ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಪಕ್ಷ ಸಂಘಟನೆಗೆ ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ. ಯುವಕರು, ಮಹಿಳೆಯರು ಹಾಗೂ ವಿವಿಧ ಸಮುದಾಯಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ರಾಬರ್ಟ್ ದಾದಾಪುರಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಾಧನೆಗಳು ಹಾಗೂ ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ಬಸವರಾಜ ಕೌಜಲಗಿ, ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮೋಹನ ಅಸುಂಡಿ, ಮುಖಂಡರಾದ ಬಾಬು ಕುಡಸೋಮಣ್ಣವರ, ಮಹಾಂತೇಶ ತುರಮರಿ, ಮಹೇಶ ಬೆಲ್ಲದ, ಈಶ್ವರ ಉಳ್ಳಾಗಡ್ಡಿ, ಸಾಮಾಜಿಕ ಜಾಲತಾಣ ಮುಖಂಡ ಹಸನ್ ಗೊರವನಕೊಳ್ಳ, ಅನಿಲ ಮ್ಯಾಕಲಮರಡಿ, ಉಮೇಶ ಬೋಳೆತ್ತಿನ, ಪ್ರಶಾಂತ ಪಟ್ಟಣಶೆಟ್ಟಿ, ಸಂಗಪ್ಪ ಬೆಳಗಾವಿ,
ಜಗದೀಶ ತೋಟಗಿ, ಬುಡ್ಡೇಸಾಬ್ ಶಿರಸಂಗಿ, ಬಾಬುಸಾಬ್ ಸುತಗಟ್ಟಿ, ಕುತುಬುದ್ದೀನ್ ಮುಲ್ಲಾ, ರಾಮನಗೌಡ ಪಾಟೀಲ, ರಾಜಶೇಖರ ಮೂಗಿ, ಈರಣ್ಣ ಜವಳಿ, ಈರಣ್ಣ ಬೆಟಗೇರಿ, ನಿಸಾರಹ್ಮದ್ ತಿಗಡಿ, ಶಮಿ ಮಕಾನದಾರ್ ಇತರರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ ಸ್ವಾಗತಿಸಿದರು. ಮುರಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ ವಂದಿಸಿದರು.