ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ

ಚಿಕ್ಕಮುನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರೇಮುನವಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಗಣ್ಯರು ಕ್ರೀಡಾಜ್ಯೋತಿ ಬರಮಾಡಿಕೊಂಡರು. ದಶರಥ ಬನೋಶಿ, ಬಸವರಾಜ ಸಪ್ಪನ್ನವರ, ಮಹಾದೇವಿ ಹಣಗೋಜಿ ಇತರರಿದ್ದರು.

Published on

ಸ್ಪರ್ಧಾತ್ಮಕ ಮನೋಭಾವ ವೃದ್ಧಿಗೆ ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಡಿ.ಸಿಂಪಿ ಹೇಳಿದರು.

ಸಮೀಪದ ಚಿಕ್ಕಮುನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರೇಮುನವಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ತೊಡಗಿಸಿಕೊಂಡು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಕನ್ನಡ ಪರ ಹೋರಾಟಗಾರ ದಶರಥ ಬನೋಶಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಸಪ್ಪನ್ನವರ, ಉಪಾಧ್ಯಕ್ಷೆ ಮಹಾದೇವಿ ಹಣಗೋಜಿ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಗಾಣಗಿ, ಬಿಷ್ಟಪ್ಪ ಬನೋಶಿ, ಈಶ್ವರ ಪಾರಿಶ್ವಾಡ, ಸುರೇಶ ಕರ್ಕಿ, ಶಿವಾಜಿ ಸನದಿ, ರುದ್ರಪ್ಪ ಕೋಲಕಾರ, ಬಾಳಪ್ಪ ವಡ್ಡಿನ, ಬಸವರಾಜ ಕುರಬರ, ಗಜಾನನ ಪೋತದಾರ, ಬಸವರಾಜ ಸಂಪಗಾವಿ, ಬಸವರಾಜ ಗೌರಕ್ಕನವರ, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಕೆ.ಪಾಟೀಲ, ಸಂಜಯ ಸಿಪರಮಟ್ಟಿ, ಬಸವರಾಜ ಇಟಗಿ ಹಾಗೂ ಎಸ್‌ಡಿಎಂಸಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net