ರಾಯಬಾಗ ಪಟ್ಟಣದ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಚಂದ್ರಶೇಖರ ಶಿವಾಚಾರ್ಯರು, ಅರುಣ ಐಹೊಳೆ, ಸುಶೀಲಾ ಐಹೊಳೆ, ಮನೋಹರ ಪೂಜೇರಿ ಇತರರಿದ್ದರು.
ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನ, ಬಹುಮಾನ ವಿತರಣೆ ಹಾಗೂ ಪಾಲಕರ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ,
ಮಕ್ಕಳ ಓದಿಗಾಗಿ ಪಾಲಕರು ಮೊಬೈಲ್, ಟಿವಿ ಬಳಕೆ ಕಡಿಮೆ ಮಾಡಿ, ಅವರ ಓದಿಗೆ ಬೆಂಬಲವಾಗಿ ನಿಲ್ಲಬೇಕು. ಮಕ್ಕಳು ತಂದೆ-ತಾಯಿ ಕಷ್ಟ ಅರಿತು ನಡೆಯಬೇಕೆಂದರು. ನಿವೃತ್ತ ಪ್ರಾಧ್ಯಾಪಕ ಡಾ.ಜೀವಂಧರ ಕೇತಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಧ್ಯಾನದೊಂದಿಗೆ ಸಹಜ ಶ್ವಾಸ ಕಡೆಗೆ ಗಮನಹರಿಸಿದರೆ ಉತ್ತಮ ಆರೋಗ್ಯ ಮತ್ತು ಸ್ಮರಣಶಕ್ತಿ ಹೊಂದಬಹುದು ಎಂದರು.
ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷ ಅರುಣ ಐಹೊಳೆ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯೆ ಸುಶೀಲಾ ಐಹೊಳೆ, ಮನೋಹರ ಪೂಜೇರಿ, ಆರ್.ಎಂ.ಕುರಾಡೆ, ಪೃಥ್ವಿರಾಜ ಜಾಧವ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಸದಾನಂದ ಹಳಿಂಗಳಿ, ಎಸ್.ಎಸ್.ಕಾಂಬಳೆ, ಸಂಗನಗೌಡ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಬಿ.ಬಿ.ಪೂಜಾರ ಇತರರು ಇದ್ದರು.