ಶಿಬಿರದಲ್ಲಿ 125 ಜನರ ಆರೋಗ್ಯ ತಪಾಸಿಸಲಾಯಿತು. 42 ಜನರಿಗೆ ಜನರಲ್ ಮೆಡಿಸಿನ ವಿಭಾಗದ ಡಾ.ದಿಶಾ ಭಾಕರ ತಪಾಸಿಸಿ, ಅದರಲ್ಲಿ 10 ಜನರಿಗೆ ರಕ್ತದೊತ್ತಡ ಹಾಗೂ ಮಧುಮೇಹದ ಸಮಸ್ಯೆಗಳಿರುವುದು ತಿಳಿದು ಬಂತು. ಎಲುಬು-ಕೀಲು ವೈದ್ಯ ಡಾ.ಸಿ.ವಿ.ಶೆಟ್ಟರ 30 ಜನರಿಗೆ ತಪಾಸಿಸಿದಾಗ, 7 ಜನರಿಗೆ ಸಂಧಿವಾತ ಹಾಗೂ ಮತ್ತಿತರ ಎಲುಬು-ಕೀಲು ಸಮಸ್ಯೆಗಳಿರುವುದು ಕಂಡು ಬಂತು. 28 ಮಕ್ಕಳನ್ನು ಡಾ.ಸಂತೋಷಕುಮಾರ ಕರಮಸಿ, ನೇತ್ರ ವೈದ್ಯೆ ಡಾ.ಸ್ಫೂರ್ತಿ ಮೊರಪ್ಪನವರ 36 ಜನರಿಗೆ ತಪಾಸಿಸಿದರು.