ಪಾಲಕರೇ ಮಕ್ಕಳ ಭವಿಷ್ಯ ಭದ್ರಗೊಳಿಸಿ

ಹಿರೇಉಳ್ಳಿಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಪಂ ಇಒ ಆನಂದ ಬಡಕುಂದ್ರಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು. ಬಿಇಒ ಅಕ್ಬರಲಿ ಖಾಜಿ, ಶಿವಮೂರ್ತಿ ಸಂಪಗಾವಿ, ಎಸ್.ಡಿ.ಮುದರಡ್ಡಿ ಇತರರಿದ್ದರು.
ಹಿರೇಉಳ್ಳಿಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಪಂ ಇಒ ಆನಂದ ಬಡಕುಂದ್ರಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು. ಬಿಇಒ ಅಕ್ಬರಲಿ ಖಾಜಿ, ಶಿವಮೂರ್ತಿ ಸಂಪಗಾವಿ, ಎಸ್.ಡಿ.ಮುದರಡ್ಡಿ ಇತರರಿದ್ದರು.
Published on
ಸವದತ್ತಿ: ಸರ್ಕಾರಿ ಶಾಲೆಗಳಲ್ಲ್ಲಿ ಮೂಲ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಕರು ಹಾಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ, ಪಾಲಕರು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮಕ್ಕಳ ಭವಿಷ್ಯ ಭದ್ರಗೊಳಿಸಬೇಕು ಎಂದು ಬಿಇಒ ಅಕ್ಬರಲಿ ಖಾಜಿ ಹೇಳಿದರು.
ತಾಲೂಕಿನ ಹಿರೇಉಳ್ಳಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿಗಳಲ್ಲೂ ಅಡಗಿರುವ ವಿಭಿನ್ನ ಪ್ರತಿಭೆ ಹೊರತರಲು ಶಿಕ್ಷಕರ ಪ್ರೋತ್ಸಾಹ ಹಾಗೂ ಸೂಕ್ತ ವೇದಿಕೆ ಅಗತ್ಯವಿದೆ. ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ ಸೇರಿದಂತೆ ವಿವಿಧ ಸೌಲಭ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಪಂ ಇಒ ಆನಂದ ಬಡಕುಂದ್ರಿ ಮಾತನಾಡಿ, ಶಾಲಾ ಪ್ರಾರಂಭೋತ್ಸವ ಮಕ್ಕಳಲ್ಲಿ ಹೊಸ ಕನಸು, ಚೈತನ್ಯ ಮತ್ತು ಸಾಧನೆ ಸಂಕಲ್ಪ ಮೂಡಿಸುವ ಮಹತ್ವದ ಘಟ್ಟವಾಗಿದೆ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಜತೆಗೆ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ತಿಳಿಸಿದರು.
ಶಿವಮೂರ್ತಿ ಸಂಪಗಾವಿ, ಅದೃಷ್ಯ ಹೆಬ್ಬಳ್ಳಿ, ಸಂಗಮೇಶ ಸವಟಗಿ, ಗೂಳೇಶ ಸುಣಗಾರ, ನಾಗರತ್ನಾ ಉಂಡಿ, ತುಳಸಮ್ಮ ದಾಸನಕೊಪ್ಪ, ಲಕ್ಷ್ಮೀ ಉಳಲ್ಲೋರ, ಮಂಜುನಾಥ ಸಂಗೊಳ್ಳಿ, ಮುಖ್ಯಶಿಕ್ಷಕ ಎಸ್.ಡಿ.ಮುದರಡ್ಡಿ, ಎಸ್.ಎಲ್.ಅಲಿಖಾನ, ಎಂ.ವಿ.ಶಿರೂರ, ಆರ್.ಬಿ.ಪೋಳ, ಎ.ಎ.ಗೋಕನ್ನವರ, ಭಾರತಿ ಗುಡಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net