ಪಂಢರಪುರ ದಿಂಡಿಯಾತ್ರೆಗೆ ಚಾಲನೆ

ಬೆಣಚಿನಮರಡಿ(ಕೊ) ಗ್ರಾಮದಿಂದ ಸುಕ್ಷೇತ್ರ ಪಂಢರಪುರಕ್ಕೆ ಸಂತ ಮಂಡಳಿ ಜೋಡೆತ್ತಿನ ರಥೋತ್ಸವ ಮೂಲಕ ದಿಂಡಿ ಪಾದಯಾತ್ರೆ ತೆರಳಿತು. ಬ್ರಹ್ಮಾನಂದ ಸ್ವಾಮೀಜಿ, ಸಂತ ಮುತ್ತೆಪ್ಪ ಖಿಲಾರಿ ಮಹಾರಾಜರು, ಲಕ್ಕಪ್ಪ ಲೋಕೂರೆ, ದಶರಥ ಕಿಲಾರಿ ಇತರರಿದ್ದರು.
ಬೆಣಚಿನಮರಡಿ(ಕೊ) ಗ್ರಾಮದಿಂದ ಸುಕ್ಷೇತ್ರ ಪಂಢರಪುರಕ್ಕೆ ಸಂತ ಮಂಡಳಿ ಜೋಡೆತ್ತಿನ ರಥೋತ್ಸವ ಮೂಲಕ ದಿಂಡಿ ಪಾದಯಾತ್ರೆ ತೆರಳಿತು. ಬ್ರಹ್ಮಾನಂದ ಸ್ವಾಮೀಜಿ, ಸಂತ ಮುತ್ತೆಪ್ಪ ಖಿಲಾರಿ ಮಹಾರಾಜರು, ಲಕ್ಕಪ್ಪ ಲೋಕೂರೆ, ದಶರಥ ಕಿಲಾರಿ ಇತರರಿದ್ದರು.
Published on
ಮಮದಾಪುರ: ಗೋಕಾಕ ತಾಲೂಕಿನ ಬೆಣಚಿನಮರಡಿ(ಕೊ) ಗ್ರಾಮದ ಸಂತ ಸದ್ಭಕ್ತ ಮಂಡಳಿ ಆಷಾಢ ಮಾಸದ ಅಂಗವಾಗಿ ಸುಕ್ಷೇತ್ರ ಪಂಢರಪುರ ಪಂಢರಿನಾಥ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ದರ್ಶನಕ್ಕೆ ಹೊರಟ 24ನೇ ದಿಂಡಿ ಪಾದಯಾತ್ರೆ ಹಾಗೂ ಜೋಡೆತ್ತಿನ ರಥೋತ್ಸವ ಭಾನುವಾರ ತೆರಳಿತು.
ಗ್ರಾಮದ ಪಾಂಡುರಂಗ ವಿಠ್ಠಲ-ರುಕ್ಮಿಣಿ ಮಂದಿರದ ಗದ್ದುಗೆಗೆ ಬೆಳಗ್ಗೆ 6ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 10 ಗಂಟೆಗೆ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಗೋಕಾಕನ ಬ್ರಹ್ಮಾನಂದ ಸ್ವಾಮೀಜಿ ಪೂಜೆ ಸಲ್ಲಿಸಿದರು. ಬಳಿಕ ಮುಖಂಡ ಲಕ್ಕಪ್ಪ ಲೋಕೂರೆ ದಿಂಡಿ ಪಾದಯಾತ್ರೆ ಹಾಗೂ ಜೋಡೆತ್ತಿನ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂತ ಮುತ್ತೆಪ್ಪ ಖಿಲಾರಿ ಮಹಾರಾಜರ ಸಾನ್ನಿಧ್ಯದಲ್ಲಿ ಸಂತ ಮಂಡಳಿ ತಾಳ, ತಂಬೂರಿಯೊಂದಿಗೆ ಹಾಗೂ ಮಹಿಳೆಯರು ತುಳಸಿ ಕಟ್ಟಿ ಹೊತ್ತು ಭಕ್ತಿಯಿಂದ ಭಜನೆ ಮೂಲಕ ಗೋಕಾಕ ಮಾರ್ಗವಾಗಿ ದಿಂಡಿ ಯಾತ್ರೆ ಕೈಗೊಂಡರು. ಮುಗಳಿಹಾಳದ ಸಂತ ಭಗವಂತ ಮಹಾರಾಜರು, ದಶರಥ ಕಿಲಾರಿ, ಪ್ರಕಾಶ ಕಿಲಾರಿ, ಸತ್ಯಪ್ಪ ಮಾಳಗಿ, ಗೋಪಾಲ ಬಂಡಿವಡ್ದರ, ಸಿಂಗಾಡೆಪ್ಪ
ಕಿಲಾರಿ, ಗೋಪಾಲ ಕಿಲಾರಿ, ಮಹಾದೇವ ಗುಗ್ಗುರಿ, ಸಿದ್ದಪ್ಪ ಚಿಕ್ಕಾಲಗುಂಡಿ, ಬೀರಪ್ಪ ಕಿಲಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net