ಪಂಜಾಗೆ ಪಂಚಪರಾಳ ಸಮರ್ಪಣೆ

ಕೊಕಟನೂರ ಗ್ರಾಮದಲ್ಲಿ ಮೊಹರಂ ನಿಮಿತ್ತ ಪಂಜಾ ದೇವರ ಮರವಣಿಗೆ ನಡೆಯಿತು. ಬಸೀರ್ ಮುಲ್ಲಾ, ವಿಶಾಲ ದೇಸಾಯಿ, ರಾಜೇಂದ್ರ ಪಾಟೀಲ, ಶ್ರೀಪಾದ ಕುಲಕರ್ಣಿ ಇತರರಿದ್ದರು.
ಕೊಕಟನೂರ ಗ್ರಾಮದಲ್ಲಿ ಮೊಹರಂ ನಿಮಿತ್ತ ಪಂಜಾ ದೇವರ ಮರವಣಿಗೆ ನಡೆಯಿತು. ಬಸೀರ್ ಮುಲ್ಲಾ, ವಿಶಾಲ ದೇಸಾಯಿ, ರಾಜೇಂದ್ರ ಪಾಟೀಲ, ಶ್ರೀಪಾದ ಕುಲಕರ್ಣಿ ಇತರರಿದ್ದರು.
Published on
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೋಹಳ್ಳಿ, ಕೊಕಟನೂರ, ಸಂಕೋನಟ್ಟಿ, ಯಲಿಹಡಲಗಿ, ಹಲ್ಯಾಳ, ಚಮಕೇರಿ, ಅಡಹಳ್ಳಿ, ಅನಂತಪುರ, ಸವದಿ, ಸಪ್ತಸಾಗರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಶ್ರದ್ಧೆ, ಭಕ್ತಿಯಿಂದ ಶುಕ್ರವಾರ ಮೊಹರಂ ಆಚರಿಸಲಾಯಿತು.
ಕಳೆದ 5 ದಿನಗಳಿಂದ ಮಸೀದಿಯಲ್ಲಿ ಪಂಜಾಗಳನ್ನು ಅಲಂಕರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಭಕ್ತರು ತಾಜಿಯಾ ಮರವಣಿಗೆ ನಡೆಸಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಹಲಗೆ, ಲೇಜಿಮ್ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಸಂಜೆ ಪಂಜಾ ದೇವರು ಹೊಳೆಗೆ ಹೋಗುವ ಸಂದರ್ಭದಲ್ಲಿ ಭಕ್ತರು ಉತ್ತತ್ತಿ, ಚುರುಮರಿ, ಪುಟಾಣಿ ಸೇರಿದಂತೆ ಪಂಚಪರಾಳ ಅರ್ಪಿಸಿ ಹರಕೆ ತೀರಿಸಿದರು.
ಬಸೀರ್ ಮುಲ್ಲಾ, ವಿಶಾಲ ದೇಸಾಯಿ, ರಾಜೇಂದ್ರ ಪಾಟೀಲ, ಶ್ರೀಪಾದ ಕುಲಕರ್ಣಿ, ಮಹಾವೀರ ಹಳಕಿ, ಸುಭಾಸ ಸೋನಕರ, ಬಂದೇನಮಾಜ್ ಮುಜಾವರ್, ಸುರೇಶ ಹರಪಾಳೆ, ಭೀಮು ಕುಂಬಾರ, ಸಂಗಪ್ಪ ಡಂಬಳ, ಸಿಕಂದರ್ ಮುಜಾವರ್, ಪಾಂಡುರಂಗ ಚೌಹಾಣ, ಮೌಲಾಸಾಬ್ ನದಾಫ್, ಗೋಪಾಲ ನಾಯಿಕ, ರಾಜೇಸಾಬ್ ನದಾಫ್, ಕಾಸೀಂ ಮುಲ್ಲಾ, ರಮಜಾನ್ ಮುಲ್ಲಾ, ದತ್ತಾತ್ರೇಯ ಶಿಂಧೆ, ಬಾಳು ಹವಾಲ್ದಾರ್, ಮಹಾದೇವ ಪಾಟೀಲ, ಬೀರಪ್ಪ ಬಾಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net