

ಜೀವಮಾನ ಸಾಧನೆ ಮತ್ತುಪ್ರಶಸ್ತಿಗಳು ಅಮೆರಿಕದ ನ್ಯೂಯಾರ್ಕ್ ವೀರಶೈವ ಸಮಾಜ, ರತನ ಟಾಟಾ, ಭಾರತೀಯ ಶುಗರ್ ಇಂಡಸ್ಟ್ರಿ, ಭಾರತೀಯ ಸಕ್ಕರೆ ತಂತ್ರಜ್ಞರ ಒಕ್ಕೂಟ, ನವಭಾರತ ಹಾಗೂ ಇಂಡೋ ಅಮೆರಿಕನ್ ಪ್ರೆಸ್ ಕ್ಲಬ್‌ನಿಂದ ಡಾ.ಪ್ರಭಾಕರ ಕೋರೆ ಅವರಿಗೆ ಜೀವಮಾನಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕ ರಾಜ್ಯೋತ್ಸವ, ಜೈಂಟ್ಸ್ ಇಂಟರ್‌ನ್ಯಾಷನಲ್ ಪ್ರಶಸ್ತಿ, ಬಹರೇನ್ ಕನ್ನಡ ಸಂಘದ ಕನ್ನಡ ವೈಭವ ಪ್ರಶಸ್ತಿ, ಕತಾರ್ ಕನ್ನಡ ಸಂಘದ ‘ಶ್ರೇಷ್ಠ ಶಿಕ್ಷಣ ತಜ್ಞ’ ಪ್ರಶಸ್ತಿ, ನರ್ಗಿಸ್ ದತ್ತ ಪ್ರತಿಷ್ಠಾನದ ಪುರಸ್ಕಾರ, ಧಾರವಾಡ ಮುರುಘಾಮಠದ ಮೃತ್ಯುಂಜಯ ಮಹಾಂತ ಪ್ರಶಸ್ತಿ, ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರಿಂದ ವಿಶ್ವಚೇತನ ಪ್ರಶಸ್ತಿ, ಅಮೆರಿಕದ ಗ್‌ಟಿ ಆಫ್ ಲೈಫ್ ಫೌಂಡೇಷನ್ ನ ‘ಎಂಜಿಲ್’ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಕೆಂಗಲ್ ಹನುಮಂತಯ್ಯ ಪ್ರಶಸ್ತಿ, ವೀರಭದ್ರೇಶ್ವರ ಪ್ರಶಸ್ತಿ, ಡೆಕ್ಕನ್ ಶುಗರ್ ಟೆಕ್ನಾಲಜಿಸ್ಟ್‌ನಿಂದ ಸಾಖರ ಉದ್ಯೋಗ ಗೌರವ ಪುರಸ್ಕಾರ, ಶ್ರೇಷ್ಠ ಕನ್ನಡಿಗ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ, ಎಚ್.ಡಿ.ದೇವೇಗೌಡ ಪ್ರಶಸ್ತಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯ, ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಮಲೇಷಿಯಾದ ಸೆನ್ಸ್ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಪಿಲಾಡೆಮಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿವೆ.
ನನ್ನ ಸಾಮಾಜಿಕ ಕಳಕಳಿಗೆ ಕೆಎಲ್ಇ ಸಂಸ್ಥೆ ನೀರೆರೆದು ಬೆಳೆಸಿದೆ. ತಾಯ್ನಡಿನ ಜನಸಾಮಾನ್ಯರಿಗೆ ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಚಿಕಿತ್ಸೆ ಕೈಗೆಟಬೇಕು. ವಿಶೇಷವಾಗಿ ರೈತರಿಗೆ ಜಾಗತಿಕ ಮಟ್ಟದ ಸೌಲಭ್ಯ ಸಿಗಬೇಕು ಎನ್ನುವ ಹಿತದೃಷ್ಟಿಯಿಂದ ಮಾಡಿದ ಸೇವೆಗೆ ಸಿಕ್ಕ ಸಮ್ಮಾನ. ಉಸಿರಿರುವವರೆಗೂ ಜನಸೇವೆ ಮಾಡುತ್ತೇನೆ. ಈ ಪ್ರಶಸ್ತಿಯ ಶ್ರೇಯಸ್ಸು ನನ್ನ ಕೆಎಲ್ಇ ಸಂಸ್ಥೆಯ ಸಮಸ್ತ ಸಿಬ್ಬಂದಿ, ರೈತಬಾಂಧವರಿಗೆ ಸಲ್ಲಿಸುತ್ತೇನೆ.
ಪದ್ಮಶ್ರೀ ಪ್ರಶಸ್ತಿ ತಂದೆಯ ಅವಿರತ ಸಾಮಾಜಿಕ ಸೇವೆಗೆ ಸಿಕ್ಕಪುರಸ್ಕಾರ. ಪ್ರಶಸ್ತಿಯಿಂದ ನಮ್ಮ ಕುಟುಂಬದ ಅಭಿಮಾನಹೆಚ್ಚಿಸಿದೆ. ಕೆಎಲ್‌ಇ ಕುಟುಂಬ ಮತ್ತು ತಾಯಿ ಆಶಾ ಕೋರೆತಂದೆಯವರ ಸೇವಾಕಾರ್ಯಗಳ ಹಿಂದಿನ ದೊಡ್ಡ ಶಕ್ತಿ.ಹಾಗಾಗಿ, ನಮ್ಮ ತಂದೆಯ ಸಾಧನೆ ಅಮೋಘವಾದುದು.