

ನನ್ನ ಗಮನಕ್ಕಿರಲಿಲ್ಲ ಪಿಎಂ ಕುಸುಮ ಯೋಜನೆಗೆ ಭೂಮಿ ಮಂಜೂರಿ ಹಾಗೂ ಮರ ಕಟಾವು ಯಾವುದೂ ನನ್ನ ಗಮನಕ್ಕಿರಲಿಲ್ಲ. ಮರ ಕಟಾವು ವಿಷಯ ಮಾಧ್ಯಮಗಳಲ್ಲಿ ಬಂದ್ ಬಳಿಕವೇ ನನಗೂ ಇದರ ಬಗ್ಗೆ ಮಾಹಿತಿ ಬಂದಿದೆ. ಅಧಿಕಾರಿಗಳನ್ನು ಕೇಳಿದಾಗ ಶ್ರೀಗಂಧ, ಸಾಗವಾನಿ ಮರಗಳು ಇಲ್ಲ ಎಂದೇ ಹೇಳಿದ್ದರು. ಈಗ ಅರಣ್ಯ ಇಲಾಖೆ ತನಿಖೆಯಲ್ಲಿ ತಪ್ಪಿತಸ್ಥನ ಬಂಧನವಾಗಿದೆ. ಉಳಿದ ಯಾರೇ ತಪ್ಪಿತಸ್ಥರಿದ್ದರೂ ಕ್ರಮವಾಗುತ್ತದೆ. ಆದರೆ ಖಾಸಗಿ ಯೋಜನೆಗೆ ಭೂಮಿ ಕೊಡುವ ಕುಮ್ಮಕ್ಕು ನಡೆದಿದೆ ಎಂದೆಲ್ಲ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಸರ್ಕಾರದ ಯೋಜನೆ ಇದಾಗಿದ್ದು, ಪಡೆದಿರುವ ಜಾಗವೂ ಸರ್ಕಾರದ್ದು.