ಸಾವಯವ ಕೃಷಿಗೆ ಆದ್ಯತೆ ಅಗತ್ಯ

 ಚಿಕ್ಕೋಡಿ ತಾಲೂಕು ಇಂಗಳಿ ಗ್ರಾಮದಲ್ಲಿ ಅಂಕಲಿ ಗ್ರಾಮದ ಕೆಎಲ್‌ಇ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಶಿಬಿರದಲ್ಲಿ ರೈತ ಗಿರೀಶ ತೆಲಸಂಗೆ ಉಪನ್ಯಾಸ ನೀಡಿದರು. ಎಂ.ಎಸ್.ಕಾನಡೆ, ಡಿ.ಎ.ಕಾಟೆ, ಎಂ.ಪಿ.ತಳವಾರ ಇದ್ದರು.
ಚಿಕ್ಕೋಡಿ ತಾಲೂಕು ಇಂಗಳಿ ಗ್ರಾಮದಲ್ಲಿ ಅಂಕಲಿ ಗ್ರಾಮದ ಕೆಎಲ್‌ಇ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಶಿಬಿರದಲ್ಲಿ ರೈತ ಗಿರೀಶ ತೆಲಸಂಗೆ ಉಪನ್ಯಾಸ ನೀಡಿದರು. ಎಂ.ಎಸ್.ಕಾನಡೆ, ಡಿ.ಎ.ಕಾಟೆ, ಎಂ.ಪಿ.ತಳವಾರ ಇದ್ದರು.
Published on
ಮಾಂಜರಿ: ರೋಗಮುಕ್ತ ಭಾರತ ನಿರ್ಮಾಣ ಕೇವಲ ಸಾವಯವ ಕಷಿಯಿಂದ ಮಾತ್ರ ಸಾಧ್ಯ. ಕಷಿ ಕ್ಷೇತ್ರವನ್ನು ಔದ್ಯಮಿಕ ಕ್ಷೇತ್ರವಾಗಿ ಬೆಳೆಸಬೇಕು. ಪೂರ್ವಜರು ಮಾಡುತ್ತಿದ್ದ ಗೋ-ಆಧರಿತ ಸಾವಯುವ ಕಷಿ ಪ್ರಸ್ತುತ ದಿನಗಳಲ್ಲೂ ಅನಿವಾರ್ಯವಾಗಿದೆ ಎಂದು ಪ್ರಗತಿಪರ ರೈತ ಗಿರೀಶ ತೆಲಸಂಗೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕೆಎಲ್‌ಇ ಸಂಸ್ಥೆ ಪದವಿ ಮಹಾವಿದ್ಯಾಲಯ ಅಂಕಲಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಗ್ರಾಮದ ಜಲಕುಂಭವನ್ನು ಶಿಬಿರಾರ್ಥಿಗಳು ಸ್ವಚ್ಛಗೊಳಿಸಿದರು. ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹಾಗೂ ‘ಗುಡ್ ಟಚ್-ಬ್ಯಾಡ್ ಟಚ್’ ಕುರಿತು ಜಾಗತಿ ಮೂಡಿಸಲಾಯಿತು.
ಪ್ರೊ.ಆರ್.ಎ.ಕೆರಗುಟ್ಟೆ ಮಾತನಾಡಿದರು. ಕಾವೇರಿ ಜಡೆಯಪ್ಪಗೋಳ ಸ್ವಾಗತಿಸಿದರು. ಎಂ.ಎಸ್.ಕಾನಡೆ, ಡಿ.ಎ.ಕಾಟೆ, ಎಂ.ಪಿ.ತಳವಾರ, ಎಸ್.ಬಿ.ಬೊಮ್ಮಣ್ಣವರ, ಎಸ್.ಎಸ್.ಚಿಕಲೆ, ಬೋಧಕ, ಬೋಧಕೇತರ ಸಿಬ್ಬಂದಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಅಶ್ವಿನಿ ಶಿಂಧೆ ನಿರೂಪಿಸಿ, ರಮ್ಯಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net