ಮಸೀದಿ ಜಾಗ ಸಮೀಕ್ಷೆಗೆ ವಿರೋಧ

ಸವದತ್ತಿಯಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಸುನೀಲ ಮಾಮನಿ, ಶ್ರೀಕಾಂತ ಜೋರಾಪುರ, ಮಲ್ಲಿಕಾರ್ಜುನ ಬೀಳಗಿ, ರಾಕೇಶ ರಜಪೂತ, ಬಸಲಿಂಗಪ್ಪ ಆಯಟ್ಟಿ ಇತರರಿದ್ದರು
ಸವದತ್ತಿಯಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಸುನೀಲ ಮಾಮನಿ, ಶ್ರೀಕಾಂತ ಜೋರಾಪುರ, ಮಲ್ಲಿಕಾರ್ಜುನ ಬೀಳಗಿ, ರಾಕೇಶ ರಜಪೂತ, ಬಸಲಿಂಗಪ್ಪ ಆಯಟ್ಟಿ ಇತರರಿದ್ದರು
Published on

ಟಕ್ಕೇದ ಮಸೀದಿ ಜಾಗದ ಅಳತೆ ಹಾಗೂ ಹದ್ದುಬಸ್ತು ಮಾಡಿಕೊಡುವಂತೆ ವಕ್ಫ್ ಮಂಡಳಿ ಪರ ನಗರದ ನಿವಾಸಿಯೊಬ್ಬರು ಸರ್ವೇ ಇಲಾಖೆಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ಸಮೀಕ್ಷೆ ನಡೆಸಲು

ಅಧಿಕಾರಿಗಳು ಆಗಮಿಸಿದ ವೇಳೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

ಟಕ್ಕೇದ ಮಸೀದಿ ಸ್ಥಳವನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುವ ಉದ್ದೇಶದಿಂದ ಜಾಗದ ಹದ್ದುಬಸ್ತು ಮಾಡಲು ಸರ್ವೇ ಇಲಾಖೆ ಮುಂದಾಗಿದೆ ಎಂದು ಆರೋಪಿಸಿ ಕೊಳ್ಳಾರ, ಚಿನಿವಾಲರ, ವಕ್ಕುಂದ ದೇವರ ಓಣಿ ಹಾಗೂ ಆನಿ ಅಗಸಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷೆ ಕೌಶಲ್ಯಾ ಮೊಟೇಕರ ಮಾತನಾಡಿ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಕ್ಫ್ ಮಂಡಳಿಗೆ ಮಸೀದಿ ಹಸ್ತಾಂತರಿಸಬಾರದು. ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಭರವಸೆ: ಸಿಟಿಸಿ ನಂ.537ರಲ್ಲಿರುವ ಟಕ್ಕೇದ ಮಸೀದಿ ಜಾಗದ ಸರ್ವೇ ಕಾರ್ಯ ವಿರೋಧಿಸಿ ಸಾರ್ವಜನಿಕರು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರಗೆ ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿದ ತಹಸೀಲ್ದಾರ್, ವಕ್ಫ್ ಮಂಡಳಿ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸುನೀಲ ಮಾಮನಿ, ಮಲ್ಲಿಕಾರ್ಜುನ ಬೀಳಗಿ, ಬಸಲಿಂಗಪ್ಪ ಆಯಟ್ಟಿ, ಮುತ್ತೆಪ್ಪ ಆಯಟ್ಟಿ, ಶ್ರೀಕಾಂತ ಜೋರಾಪುರ, ರಾಜು ಹಿಂದಿನಮನಿ, ಮಲ್ಲಿಕಾರ್ಜುನ ಹಡಪದ, ರಾಕೇಶ ರಜಪೂತ, ಕೇಶವ ರಜಪೂತ, ಶಿವಪ್ಪ ಪಡೆಪ್ಪನವರ, ಅಶೋಕ ಜೋರಾಪುರ, ಬಾಳಾರಾಮ ಜಾನ್ವೇಕರ, ದೀಪಕ ಜೋರಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net