ಆನ್​ಲೈನ್​ ಔಷಧ ಮಾರಾಟಕ್ಕೆ ವಿರೋಧ

ಆನ್​ಲೈನ್​ ಔಷಧ ಮಾರಾಟ ವಿರೋಧಿಸಿ ಬೆಳಗಾವಿಯಲ್ಲಿ ಬುಧವಾರ ಮೆಡಿಕಲ್​ ಶಾಪ್​ ಮಾಲೀಕರು ಪ್ರತಿಭಟನೆ ನಡೆಸಿದರು. ಎಸ್​.ಎಸ್​.ಗಡಿಯಣ್ಣವರ, ಎನ್​.ಜಿ.ಕುಲಕರ್ಣಿ, ಬಿ.ಎಸ್​.ಕುಡಚಿಮಠ, ಸಲೀಂ ಬರ್ಗಿರ್​, ಕೇಶವ ಕುಲಕರ್ಣಿ ಇತರರಿದ್ದರು.
ಆನ್​ಲೈನ್​ ಔಷಧ ಮಾರಾಟ ವಿರೋಧಿಸಿ ಬೆಳಗಾವಿಯಲ್ಲಿ ಬುಧವಾರ ಮೆಡಿಕಲ್​ ಶಾಪ್​ ಮಾಲೀಕರು ಪ್ರತಿಭಟನೆ ನಡೆಸಿದರು. ಎಸ್​.ಎಸ್​.ಗಡಿಯಣ್ಣವರ, ಎನ್​.ಜಿ.ಕುಲಕರ್ಣಿ, ಬಿ.ಎಸ್​.ಕುಡಚಿಮಠ, ಸಲೀಂ ಬರ್ಗಿರ್​, ಕೇಶವ ಕುಲಕರ್ಣಿ ಇತರರಿದ್ದರು.
Published on
ಬೆಳಗಾವಿ: ಆನ್​ಲೈನ್​ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲಿ ಬುಧವಾರ ಔಷಧ ಮಳಿಗೆಗಳ ಮಾಲೀಕರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಟನೆ ಕರೆ ಬೆಂಬಲಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ೇಮಾಭಿವೃದ್ಧಿ ಸಂ, ರೀಟೈಲ್​ ಫಾರ್ಮಸಿ ಅಸೋಸಿಯೇಷನ್​ ಸೇರಿದಂತೆ ವಿವಿಧ ಸಂಟನೆಗಳ ನೇತೃತ್ವದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಕನ್ನಡ ಸಾಹಿತ್ಯ ಭವನದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಆನ್​ಲೈನ್​ನಲ್ಲಿ ಯಾವುದೇ ನಿಯಂತ್ರಣ ಇಲ್ಲದೇ ಔಷಧಗಳ ಮಾರಾಟ ಮಾಡಲಾಗುತ್ತಿದೆ. ಆಂಟಿಬಯೋಟಿಕ್​, ವ್ಯಸನಕಾರಿ ಔಷಧಗಳು ದುರುಪಯೋಗವಾಗುತ್ತಿವೆ. ನಕಲಿ ಔಷಧ ಚೀಟಿ ಬಳಕೆ ಹೆಚ್ಚಳವಾಗುತ್ತಿದ್ದು, ಇದು ಯುವಕರು ಡ್ರಗ್ಸ್​ ವ್ಯಸನಿಗಳಾಗಲು ದಾರಿ ಮಾಡಿಕೊಡುತ್ತಿದೆ. ಜತೆಗೆ ಜೀವರಕ ಔಷಧಗಳ ಮೇಲೂ ಅತೀ ರಿಯಾಯಿತಿ ಕೊಡಲಾಗುತ್ತಿದ್ದು, ಇದರಿಂದ ಸಣ್ಣಪುಟ್ಟ ಔಷಧ ಅಂಗಡಿ ಮುಚ್ಚುವ ಪರಿಸ್ಥಿತಿ ಬಂದಿದೆ. ಹೀಗಾಗಿ, ಆನ್​ಲೈನ್​ ಔಷಧ ಮಾರಾಟ ವ್ಯವಸ್ಥೆಯನ್ನು ಸರ್ಕಾರ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂದ ಅಧ್ಯ ಎಸ್​.ಎಸ್​.ಗಡಿಯಣ್ಣವರ, ಪ್ರಧಾನ ಕಾರ್ಯದರ್ಶಿ ಎನ್​.ಜಿ.ಕುಲಕರ್ಣಿ, ಖಜಾಂಚಿ ಬಿ.ಎಸ್​.ಕುಡಚಿಮಠ, ಸಲೀಂ ಬರ್ಗಿರ್​, ಕೇಶವ ಕುಲಕರ್ಣಿ, ಪ್ರಕಾಶ ಚೌಧರಿ, ವೀರೇಶ ಕಿತ್ತೂರ, ಎಫ್​.ಎಂ.ಪಾಟೀಲ, ಮಹಾವೀರ ನಂದಗಾವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net