ಮ್ಯಾಗ್ನೆಟ್ ಶಾಲೆ ಯೋಜನೆಗೆ ವಿರೋಧ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಬೆಳಗಾವಿ ತಾಲೂಕಿನ ಹೊನ್ನಿಗಾಳ ಗ್ರಾಮದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಹಾಂತೇಶ ಬಿಳೂರ, ಸಂತೋಷಕುಮಾರ ಮಠದ, ಕಿರಣ, ರೋಹಿಣಿ ದೇಸಾಯಿ ಇತರರಿದ್ದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಬೆಳಗಾವಿ ತಾಲೂಕಿನ ಹೊನ್ನಿಗಾಳ ಗ್ರಾಮದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಹಾಂತೇಶ ಬಿಳೂರ, ಸಂತೋಷಕುಮಾರ ಮಠದ, ಕಿರಣ, ರೋಹಿಣಿ ದೇಸಾಯಿ ಇತರರಿದ್ದರು.
Published on
ಬೆಳಗಾವಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಬಾಳೆಕುಂದ್ರಿ (ಬಿಕೆ) ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡು ಹೊನ್ನಿಹಾಳ ಗ್ರಾಮದ ಶಾಲೆ ವಿಲೀನ ಮಾಡುತ್ತಿರುವುದನ್ನು ತಡೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ಎಐಡಿಎಸ್‌ಒ ನೇತೃತ್ವದಲ್ಲಿ ಶಾಲೆ ಎದುರು ಪ್ರತಿಭಟಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ ಮಾತನಾಡಿ, 141 ಮಕ್ಕಳ ದಾಖಲಾತಿ ಹೊಂದಿರುವ ಹೊನ್ನಿಹಾಳದ ಕನ್ನಡ ಮತ್ತು ಮರಾಠಿ ಶಾಲೆ ಸೇರಿದಂತೆ ಸಾಂಬ್ರಾ, ಬಾಳೆಕುಂದ್ರಿ (ಕೆಎಚ್) ಪಂತನಗರ ಸೇರಿ ಒಟ್ಟು 9 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಮ್ಯಾಗ್ನೆಟ್ ಶಾಲೆ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತಿದ್ದು, ಕ್ರಮೇಣ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸುವ ಹ್ನುನಾರ ಇದರಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಿಹಾಳ ಶಾಲೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂತೋಷಕುಮಾರ ಮಠದ ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳನ್ನು ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಶಾಲೆ ಉಳಿಸಿಕೊಳ್ಳಲು ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು.
ಮಾಗ್ನೆಟ್ ಯೋಜನೆ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಸುವರ್ಣಸೌಧ ಚಲೋ ಹೋರಾಟ ಮಾಡಲು ಪ್ರತಿಭಟನೆ ಬಳಿಕ ಸಭೆಯಲ್ಲಿ ನಿರ್ಧರಿಸಲಾಯಿತು.
ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ಕಿರಣ, ರೋಹಿಣಿ ದೇಸಾಯಿ, ಮಂಜು ಕೆಂಗೇರಿ, ಗೌರಿ ಅಂಕಲಿ, ಬಸವರಾಜ ಅಸುಂಡಿ, ರೇಷ್ಮಾ ಗೋಡೆದುರ್ಗ ಇತರರಿದ್ದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಬೆಳಗಾವಿ ತಾಲೂಕಿನ ಹೊನ್ನಿಗಾಳ ಗ್ರಾಮದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಹಾಂತೇಶ ಬಿಳೂರ, ಸಂತೋಷಕುಮಾರ ಮಠದ, ಕಿರಣ, ರೋಹಿಣಿ ದೇಸಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net