ರಕ್ಷಣಾ ಪಡೆಗಳನ್ನು ತಾಂತ್ರಿಕವಾಗಿ ಸಶಕ್ತಗೊಳಿಸುವ ಜವಾಬ್ದಾರಿ ಯುವಇಂಜಿನಿಯರ್‌ಗಳ ಮೇಲಿದೆ ಎಂದು ಹಿಂದೂಸ್ತಾನ ಏರೋನಾಟಿಕಲ್
ಲಿಮಿಟೆಡ್ ಏರ್‌ಕ್ರ್‌ಟಾ ರಿಸರ್ಚ್ ಆ್ಯಂಡ್ ಡಿಸೈನ್ ಸೆಂಟರ್ ಮ್ಯಾನೇಜರ್ ಡಾ.ಮಹಾದೇವ
ನಾಗರಾಳ ಹೇಳಿದರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಇಂದು 25 ಸಾವಿರ ಕೋಟಿ ರೂ. ವಿಮಾನಗಳ ರಫ್ತು ಮಾಡುತ್ತಿದ್ದೇವೆ. ಹಿಂದೂಸ್ತಾನ ಏರೋನಾಟಿಕಲ್ ಲಿ. ಸಂಸ್ಥೆಯಿಂದ ದೇಶದ ರಕ್ಷಣಾ ಪಡೆಗಳಿಗೆ ಯುದ್ಧ ವಿಮಾನ ನೀಡುತ್ತಿದ್ದೇವೆ. ವಿಮಾನ ತಯಾರಿಕೆಯಲ್ಲಿ ಮೆಕಾನಿಕಲ್ ಇಂಜಿನಿಯರ್ ಪಾತ್ರ ಮುಖ್ಯ. ಇಂಜಿನಿಯರಿಂಗ್‌ನಲ್ಲಿ ಕಲಿಯುವ ಪ್ರತಿ ವಿಷಯ ತನ್ನದೇ ಮಹತ್ವ ಹೊಂದಿದೆ. ಕಲಿಯುವ ಪ್ರತಿ ಪರಿಕಲ್ಪನೆಯಲ್ಲಿ ಸ್ಪಷ್ಟತೆ ಇರಬೇಕು. ಆಗ ಮಾತ್ರ ಉದ್ಯಮದಲ್ಲಿ ಎದುರಾಗುವ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದು ಎಂದರು.