ಮಹಾಂತ ದುರದುಂಡೀಶ್ವರ ಮಠದಲ್ಲಿ ಲಿಂ.ಮಹಾಂತ ಶಿವಯೋಗಿಗಳ 157ನೇ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಉಪನ್ಯಾಸ ನೀಡಿದರು.
ಲಿಂ.ಮಹಾಂತ ಶಿವಯೋಗಿಗಳು ಸಮಾಜದ ಏಳಿಗೆಗಾಗಿ ಶತಮಾನೋತ್ಸವ ಸವಿನೆನಪಿಗಾಗಿ ಅಂದು ಧಾರವಾಡದಲ್ಲಿ ಬಸವ ಅಧ್ಯಯನ ಪೀಠ ನಿರ್ಮಿಸಿರುವ ಕಾರ್ಯ ಸ್ಮರಣೀಯ ಎಂದರು.
ನೀಲಕಂಠ ಸ್ವಾಮೀಜಿ ಮಾತನಾಡಿ, ಲಿಂ.ಮಹಾಂತ ಅಜ್ಜನ ಮಹಿಮೆಯಿಂದ ಮುರಗೋಡ ಪುಣ್ಯಕ್ಷೇತ್ರವಾಗಿದ್ದು, ಭಕ್ತರ ಸಹಕಾರದಿಂದ ಶ್ರೀಮಠ ಪ್ರಗತಿ ಪಥದತ್ತ ಸಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗುರುಭವನ ನಿರ್ಮಾಣ ಕಾರ್ಯಕ್ಕೆ ಎಲ್ಲ ಭಕ್ತರು ಕೈಜೋಡಿಸಬೇಕು ಎಂದು ತಿಳಿಸಿದರು.