ಮರಿಕಟ್ಟಿಯಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮಿಲನ

ಬೈಲಹೊಂಗಲ ತಾಲೂಕಿನ ಮರಿಕಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ 2010&11ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಎಂ.ವಿ.ಗಾವಡೆ, ಎಂ.ಎಸ್​.ಮೇದಾರ, ವೈ.ಸಿ.ಕರಿಕಟ್ಟಿ, ಶಾಂತಕುಮಾರ ಇತರರಿದ್ದಾರೆ.
ಬೈಲಹೊಂಗಲ ತಾಲೂಕಿನ ಮರಿಕಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ 2010&11ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಎಂ.ವಿ.ಗಾವಡೆ, ಎಂ.ಎಸ್​.ಮೇದಾರ, ವೈ.ಸಿ.ಕರಿಕಟ್ಟಿ, ಶಾಂತಕುಮಾರ ಇತರರಿದ್ದಾರೆ.
Published on
ಬೆಳಗಾವಿ: ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2010&11ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಸ್ಮೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಶನಿವಾರ ಜರುಗಿತು.
ಸಮಾರಂಭದಲ್ಲಿ 14 ವರ್ಷಗಳ ಹಿಂದೆ ಎಸ್​ಎಸ್​ಎಲ್​ಸಿ ಕಲಿತು, ಬೇರೆ ಬೇರೆ ಕ್ಷೇತ್ರಗಳಲ್ಲಿ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ಹಳೇ ವಿದ್ಯಾರ್ಥಿಗಳು ಪುನ@ ತಮ್ಮ ಕ್ಲಾಸ್​ರೂಮ್​ನಲ್ಲಿ ಸೇರಿ, ಅಂದು ಕಲಿಸಿದ ಗುರುಗಳೊಂದಿಗಿನ ಹಾಗೂ ಗೆಳೆಯರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು. ಕಲಿಸಿದ ಗುರುಗಳಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಶಿಕ್ಷಕ ಎಂ.ಎಸ್​.ಮೇದಾರ ಮಾತನಾಡಿ, ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕಲಿಸಿದ ಗುರುಗಳು ಮತ್ತು ಶಾಲೆಯನ್ನು ಎಂದಿಗೂ ಮರೆಯಬಾರದು. ನಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಪುನ ಶಾಲೆಯಲ್ಲಿ ಸೇರಿ ಗುರುಗಳ ಋಣ ತೀರಿಸುವ ನಿಟ್ಟಿನಲ್ಲಿ ಸನ್ಮಾನಿಸಿರುವುದು ಶ್ಲಾನೀಯ ಎಂದರು.
ಮುಖ್ಯಶಿಕ್ಷಕ ಎಂ.ವಿ.ಗಾವಡೆ ಅಧ್ಯತೆ ವಹಿಸಿದ್ದರು. ವೈ.ಸಿ.ಕರಿಕಟ್ಟಿ, ಐ.ಸಿ.ಯಲ್ಲಪ್ಪನವರ, ಶಾಂತಕುಮಾರ, ಆರ್​.ಎಸ್​.ಗರಗದ, ಸಿ.ಬಿ.ತುರಮರಿ ಬಿ.ಪಿ.ಧರಣಿ, ಆರ್​.ಎಸ್​.ಜೋಶಿ, ಬಿ.ಬಿ.ಜಡಿಮಠ, ಎಸ್​.ಎಸ್​.ಜಾಧವ, ಎಸ್​.ಕೆ.ಮಂಗನಾಯಕ, ಎಂ.ಎಂ.ಪತ್ತಾರ, ಟಿ.ವಿ.ದೇಶಪಾಂಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net