ಬೆಟಗೇರಿ: ಜಾಗೃತ ಮಾರುತಿ ದೇವರ ಕಡೇ ಓಕುಳಿ ಈಚೆಗೆ ಸಹಸ್ರಾರು ಭಕ್ತರ ಸಮೂಹದಲ್ಲಿ ಸಂಭ್ರಮದಿಂದ ನೆರವೇರಿತು. ಸೋಮವಾರ ಬೆಳಗ್ಗೆ 7ಕ್ಕೆ ಮಾರುತಿ ದೇವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ವಿಶೇಷಪೂಜೆ ಅಲಂಕಾರ ನೆರವೇರಿತು. ಸಂಜೆ 5ಕ್ಕೆ ಓಕುಳಿ ಕೊಂಡಕ್ಕೆ ಸ್ಥಳೀಯ ವಿವಿಧ ದೇವರ ಪಲ್ಲಕ್ಕಿ ಪ್ರದಕ್ಷಿಣೆ ಪ್ರಾಣಿ, ಪಕ್ಷಿಗಳ ಸೋಗಿನ ಮಜಲು, ಯುವಕರು ಕಾಲಿಗೆ ಮರಗಾಲು ಕಟ್ಟಿ ವಾಧ್ಯಮೇಳಗಳ ತಾಳಕ್ಕೆ ಕುಣಿದ ಕುಣಿತ ನೋಡುಗರ ಗಮನ ಸೆಳೆಯಿತು. ಭಕ್ತಾದಿಗಳು ನೈವೇದ್ಯ ಅರ್ಪಿಸಿ ದೇವರಲ್ಲಿ ಪ್ರಾರ್ಥಿಸಿದರು. ಬಣ್ಣದೊಕುಳಿ ಬಳಿಕ ಮಕ್ಕಳು, ಯುವಕರು, ವದ್ಧರು ಉತ್ಸಾಹದಿಂದ ಕಡೇ ಓಕುಳಿಯಲ್ಲಿ ನೀರು ಎರಚಿ ಸಂಭ್ರಮಿಸಿದರು.