ಗ್ರಾಪಂನಲ್ಲಿ ಅಧಿಕಾರಿ ಆಡಳಿತ ಶುರು

ಗ್ರಾಪಂ ಚುನಾಯಿತ ಪ್ರತಿನಿಧಿ ಅಧಿಕಾರವಧಿ ಮುಕ್ತಯವಾಗಿದ್ದು
ಗ್ರಾಪಂ ಚುನಾಯಿತ ಪ್ರತಿನಿಧಿ ಅಧಿಕಾರವಧಿ ಮುಕ್ತಯವಾಗಿದ್ದು
Published on
ಬೆಳಗಾವಿ
ಅಧಿಕಾರ ವಿಕೇಂದ್ರಿಕರಣ, ಹಳ್ಳಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಗ್ರಾಮ ಪಂಚಾಯತಿ (ಗ್ರಾಪಂ) ಚುನಾಯಿತ ಪ್ರತಿನಿಧಿ ಅಧಿಕಾರವಧಿ ಮುಕ್ತಯವಾಗಿದ್ದು. ಫೆ.4ರಿಂದ ಆಡಳಿತಾಧಿಕಾರಿ ಆಡಳಿತ ಶುರುವಾಗಲಿದೆ.
ಬೆಳಗಾವಿ ಜಿಲ್ಲೆಯ 15 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 500 ಗ್ರಾಪಂ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 485 ಗ್ರಾಪಂ ಸದಸ್ಯರ ಅಧಿಕಾರ ಅವಧಿ ಫೆ.3ರಕ್ಕೆ ಪೂರ್ಣಗೊಂಡಿದೆ. ಹೀಗಾಗಿ ಅಧಿಕಾರದ ಕೊನೆದಿನಂದು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ತುರುಸಿನಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸೇರಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಭೆ ನಡೆದವು. ಅಲ್ಲದೆ, 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಬಾಕಿ ಉಳಿದಿರುವ ಅನುದಾನಕ್ಕೆ ಹೊಸ ಕಾಮಗಾರಿ ಸೇರ್ಪಡೆ ಕೆಲಸ ನಡೆದಿವೆ.
ಕಳೆದ ನಾಲ್ಕೈದು ತಿಂಗಳಿನಿಂದ ಅಥಣಿ, ರಾಯಬಾಗ, ಮೂಡಲಗಿ, ಗೋಕಾಕ, ರಾಮದುರ್ಗ, ಸವದತ್ತಿ, ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ಬೈಲಹೊಂಗಲ, ಖಾನಾಪುರ ಸೇರಿ ವಿವಿಧ ತಾಲೂಕಿನ ಗ್ರಾಪಂ ಅಧ್ಯಕ್ಷ, ಸದಸ್ಯರು ಆ್ಯಕ್ಟಿವ್ ಆಗಿದ್ದು, 2025-26ನೇ ಸಾಲಿನ ಅವಧಿಯಲ್ಲಿ ಖರ್ಚಾಗದೆ ಉಳಿದಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಕೆಲಸ ವೇಗದಿಂದ ನಡೆಸಿದ್ದರು. ಅಲ್ಲದೆ, ಕೆಲ ಸದಸ್ಯರು ಮತದಾರರ ಓಲೈಕೆಗಾಗಿ ವಸತಿ ಯೋಜನೆ ಅಡಿಯಲ್ಲಿ ಮನೆ, ನಿವೇಶನ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಅವಧಿಯ ಕೊನೆಯ ದಿನಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿರುವುದು ವಿಶೇಷ ಎನ್ನಲಾಗಿದೆ.
ಈಗಾಗಲೇ ಸರ್ಕಾರವು ನೇಮಕ ಮಾಡಿರುವ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳು ಫೆ.4ರಂದು ಗ್ರಾಪಂನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ, ಗ್ರಾಪಂ ಪ್ರತಿಯೊಂದು ಕಾಮಗಾರಿ, ಅನುದಾನ ಬಳಕೆ ಸೇರಿ ಎಲ್ಲ ಆರ್ಥಿಕ ಚಟುಟಿಕೆ, ಕ್ರೀಯಾ ಯೋಜನೆ, ಫಲಾನುಭವಿಗಳ ಆಯ್ಕೆ, ಕ್ರೀಯಾ ಯೋಜನೆ ಸಿದ್ದಪಡಿಸುವುದು ಸೇರಿ ಪ್ರತಿಯೊಂದು ಗ್ರಾಪಂ ಆಡಳಿತ ಆಡಳಿತಾಧಿಕಾರಿ ಅಧೀನದಲ್ಲಿಯೇ ನಡೆಯಲಿವೆ. ಕೆಲ ತಾಲೂಕು ಮಟ್ಟದ ಅಧಿಕಾರಿಗಳಿಗೆ 3 ರಿಂದ 4 ಗ್ರಾಪಂ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೆ, ಆಡಳಿತಾಧಿಕಾರಿ ಬೇಕಾಬಿಟ್ಟಿ ಆಡಳಿತ ನಡೆಸಿದರೆ ಅವರನ್ನು ಜವಾಬ್ದಾರಿಯನನಾಗಿ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
............
ಬಾಕ್ಸ್
ಗ್ರಾಪಂ ದಾಖಲೆಗಳ ಪರಿಶೀಲನೆ ಆರಂಭ
ಗ್ರಾಪಂ ಚುನಾವಣೆ ನಡೆದು ಹೊಸ ಆಡಳಿತ ರಚನೆಯಾಗುವವರೆಗೆ ಅಧಿಕಾರಿಗಳ ಅಧೀನದಲ್ಲಿಯೇ ಆಡಳಿತ ನಡೆಯಲಿರುವ ಹಿನ್ನೆಲೆ ಎಲ್ಲ ಗ್ರಾಪಂ ಆಸ್ತಿ ದಾಖಲೆ, ಠರಾವು, ಅನುದಾನ ಬಳಕೆ, ತೆರಿಗೆ ಸಂಗ್ರಹ ವಾಗಿರುವ ನಿಧಿ-2 ಹಣ ಬಳಕೆ ಸೇರಿ ಪ್ರತಿಯೊಂದು ದಾಖಲೆಗಳ ಪರಿಶೀಲನೆಗೆ ಜಿಪಂ ವಿಶೇಷ ಅಧಿಕಾರಿ ನೇಮಕಗೊಳ್ಳಲಿದ್ದಾರೆ. ಅಲ್ಲದೆ, ನಿಧಿ-2 ಅನುದಾನ ಬೇಕಾಬಿಟ್ಟಿ ಬಳಕೆಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಅಲ್ಲದೆ, ಆಯಾ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವು ಆರಂಭಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
..........................
ಬಾಕ್ಸ್
ವಿಭಾಗ ಅಂಕಿ ಸಂಖ್ಯೆ
ಒಟ್ಟು ಗ್ರಾಪಂ 500
ಆಡಳಿತಾಧಿಕಾರಿ ನೇಮಕ 485
ಅವಧಿ ಮುಕ್ತಾಯಗೊಳ್ಳದ ಗ್ರಾಪಂ 05
..................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net