ಉತ್ತರ ವಲಯ ಐಜಿಪಿ ಸಂದೀಪ ಅಧಿಕಾರ ಸ್ವೀಕಾರ

ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲಗೆ ಗುರುವಾರ ಹಾಲಿ ಐಜಿಪಿ ಡಾ.ಚೇತನಸಿಂಗ್​ ರಾಥೋರ್​ ಅಧಿಕಾರ ಹಸ್ತಾಂತರಿಸಿದರು.
ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲಗೆ ಗುರುವಾರ ಹಾಲಿ ಐಜಿಪಿ ಡಾ.ಚೇತನಸಿಂಗ್​ ರಾಥೋರ್​ ಅಧಿಕಾರ ಹಸ್ತಾಂತರಿಸಿದರು.
Published on
ಬೆಳಗಾವಿ: ಉತ್ತರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್​ ಅಧಿಕಾರಿ ಸಂದೀಪ ಪಾಟೀಲ ಗುರುವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈವರೆಗಿನ ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್​ ರಾಥೋರ್​, ಪಾಟೀಲಗೆ ಅಧಿಕಾರ ಹಸ್ತಾಂತರಿಸಿದರು.
ಈ ಹಿಂದೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿದ್ದ ಸಂದೀಪ ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಇಂಥವರು ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಅತ್ಯಂತ ಸೂಕ್ಷ$್ಮ ವಲಯಕ್ಕೆ ಐಜಿಪಿಯಾಗಿ ಬಂದಿರುವುದರಿಂದ ಇವರ ನೇಮಕ ಮಹತ್ವ ಪಡೆದುಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net