ಕನ್ನಡ ಚಿತ್ರಗಳಲ್ಲಿ ಉತ್ತರ ಕರ್ನಾಟಕ ಭಾಷೆಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕಿದೆ

ಬೆಳಗಾವಿಯಲ್ಲಿ ಈಚೆಗೆ ಲಿಂಗಾಯತ ಮಹಿಳಾ ಸಮಾಜದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಂಠದನ ಕಲಾವಿದ ವಿನಾಯಕ ಹೋರಿಹೊಳಿ ಮತ್ತು ಸಾಹಿತಿ ಲಿಂಗರಾಜ ಜಗಜಂಪಿಯವರನ್ನು ಸನ್ಮಾನಿಸಲಾಯಿತು. ಮಧುಮತಿ ಹಿರೇಮಠ, ರಕ್ಷಾ ದೇಗಿನಾಳ, ಸರೋಜಾ ನಿಶಾನ್ದಾರ್ ಇತರರಿದ್ದಾರೆ.

Published on
ಬೆಳಗಾವಿ: ಕನ್ನಡ ಚಲನಚಿತ್ರಗಳಲ್ಲಿ ಉತ್ತರ ಕರ್ನಾಟಕದ ಕನ್ನಡದ ಹೆಚ್ಚು ಬಳಕೆ ಆಗುತ್ತಿಲ್ಲ. ಆ ಭಾಗದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರರಂಗದ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಾತ್ರ ಉತ್ತರದ ಭಾಷೆಗೆ ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದು ಎಂದು ಕಂಠದಾನ ಕಲಾವಿದ ವಿನಾಯಕ ಹೋರಿಹೊಳಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದಿಂದ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ, ಜಾನಪದ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವವನ್ನು ಜನಪದ ಗೀತೆಗಳನ್ನು ಹಾಡುವ ಮೂಲಕ ಪ್ರಸ್ತಾಪಿಸಿದರು.
ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಾಳ, ಉಪಕಾರ್ಯದರ್ಶಿ ಸರೋಜಾ ನಿಶಾನ್ದಾರ್ ಇತರರಿದ್ದರು. ಇದೇ ವೇಳೆ ಆತ್ಮ ನಿರ್ಭರ ಯೋಜನೆ ಅಡಿ ನಿರ್ಮಿಸಿರುವ ಸುಪ್ರಿಯಾ ನಿಪ್ಪಾಣಿ ನಿರ್ದೇಶನದ ’ರೊಟ್ಟಿ’ ಚಿತ್ರ ಪ್ರದರ್ಶಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net