ಸದ್ಯ ಬೆಳಗಾವಿ ನಗರದಲ್ಲಿ 50 ಸೇರಿ ಜಿಲ್ಲೆಯಾದ್ಯಂತ 560 ಪೆಟ್ರೋಲ್, ಡಿಸೆಲ್ ಬಂಕ್ ಕಾರ್ಯನಿರ್ವಹಿಸುತ್ತಿವೆ.ಸಾಮಾನ್ಯ ದಿನದಲ್ಲಿ 1.36 ಲಕ್ಷ ಲೀಟರ್ ಪೆಟ್ರೋಲ್, ಡಿಸೆಲ್ ಮಾರಾಟವಾಗುತ್ತಿದೆ. ಆದರೆ, ವದಂತಿ ಹಿನ್ನೆಲೆ ಎರಡು ದಿನದಲ್ಲಿ 2.69ಲಕ್ಷ ಲೀಟರ್ ಮಾರಾಟವಾಗಿದೆ. ಹೀಗಾಗಿ ಎಲ್ಲ ಬಂಕ್‌ಗಳಲ್ಲಿ ಸಂಗ್ರಹವಿದ್ದ ಪೆಟ್ರೋಲ್, ಡಿಸೆಲ್ ಖಾಲಿಯಾಗಿದ್ದರಿಂದ ಸಮಸ್ಯೆ ಉದ್ಬವಿಸಿರಬಹುದು. ಆದರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ತೈಲ ಸಂಗ್ರಹ ಡಿಪೋದಿಂದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಒಂದು ತಿಂಗಳವರೆಗೆ ಸಾಕಾಗುಷ್ಟು ಸಂಗ್ರಹವಿದೆ. ಬಂಕ್ ಮಾಲೀಕರು ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕಬೇಕು. ಬಾಟಲ್, ಕ್ಯಾನ್‌ಗಳಲ್ಲಿ ಪೆಟ್ರೋಲ್ ಹಾಕಿದರೆ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.