ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ

ಹುಕ್ಕೇರಿ ವಿಶ್ವರಾಜ ಭವನದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರನ್ನು ತಾಲೂಕಿನ ಪಿಕೆಪಿಎಸ್‌ಗಳ ಪರವಾಗಿ ಸನ್ಮಾನಿಸಲಾಯಿತು. ನಿಖಿಲ ಕತ್ತಿ, ಎ.ಬಿ.ಪಾಟೀಲ, ಸತ್ತೆಪ್ಪ ನಾಯಿಕ, ಎಚ್.ಎಲ್.ಪೂಜೇರಿ ಇತರರಿದ್ದರು.
ಹುಕ್ಕೇರಿ ವಿಶ್ವರಾಜ ಭವನದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರನ್ನು ತಾಲೂಕಿನ ಪಿಕೆಪಿಎಸ್‌ಗಳ ಪರವಾಗಿ ಸನ್ಮಾನಿಸಲಾಯಿತು. ನಿಖಿಲ ಕತ್ತಿ, ಎ.ಬಿ.ಪಾಟೀಲ, ಸತ್ತೆಪ್ಪ ನಾಯಿಕ, ಎಚ್.ಎಲ್.ಪೂಜೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅಭಿಮತ
  • ಸನ್ಮಾನ ಸಮಾರಂಭ
ಹುಕ್ಕೇರಿ: ಜಾತಿ, ಪಕ್ಷರಹಿತವಾಗಿ ಜನಸೇವೆ ಮಾಡುತ್ತಿದ್ದೇನೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪರ ವಿರೋಧ ಗಮನಿಸದೆ ರೈತ ಸದಸ್ಯರಿಗೆ ಅನುಕೂಲವಾಗುವಂತೆ ಸಾಲ ನೀಡಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಪಟ್ಟಣದ ವಿಶ್ವರಾಜ ಭವನದಲ್ಲಿ ತಾಲೂಕಿನ ಪಿಕೆಪಿಎಸ್ ಸಂಘದವರು ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶತಮಾನಗಳ ಹಿಂದೆ ಸಹಕಾರ ಕ್ಷೇತ್ರ ಹುಟ್ಟುಹಾಕಲು ಹಿರಿಯರು ಶ್ರಮಿಸಿದ್ದು, ಉಳಿಸಿಕೊಳ್ಳಲು ಹೋರಾಡಬೇಕಿದೆ. ಸಹಕಾರ ಕ್ಷೇತ್ರವನ್ನು ಇಂದು ರಾಜಕೀಕರಣ ಆಗುತ್ತಿರುವುದು ವಿಷಾದಕರ. ತಾಲೂಕಿನ ಸಹಕಾರ ಕ್ಷೇತ್ರದಲ್ಲಿ ಹೊರಗಿನವರು ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಅವರ ಆಮಿಷ ಧಿಕ್ಕರಿಸಿ ಜನರು ಸ್ವಾಭಿಮಾನ ಪ್ರದರ್ಶಿಸಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಘಟನೆ ಎಂದರು.
ಗ್ರಾಪಂ, ತಾಪಂ, ಜಿಪಂ ಹಾಗೂ ಪುರಸಭೆ ಚುನಾವಣೆಗಳಲ್ಲಿ ಕತ್ತಿ ಮತ್ತು ಎ.ಬಿ.ಪಾಟೀಲ ಕುಟುಂಬ ಒಟ್ಟಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಿಡಿಸಿಸಿ ಬ್ಯಾಂಕ್‌ಗೆ 40 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಇಂತಹ ಐತಿಹಾಸಿಕ ದಾಖಲೆಗೆ ತಾಲೂಕಿನ ಜನರ ಪ್ರೀತಿ, ಆಶೀರ್ವಾದ ಕಾರಣ. 1985-86ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ 580 ಕೋಟಿ ರೂ. ಇದ್ದ ಬಂಡವಾಳ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ 6,800 ತಲುಪಿತ್ತು. ತಾಲೂಕಿನ 54 ಸಾವಿರ ಸದಸ್ಯರಿಗೆ 400 ಕೋಟಿ ರೂ. ಶೂನ್ಯ ಬಡ್ಡಿದರದ ಸಾಲ ವಿತರಿಸಿದ್ದು, 380 ಕೋಟಿ ರೂ. ಸಾಲ ಬಡ್ಡಿ ಮನ್ನಾ ದೊರಕಿದೆ. ತಾಲೂಕಿನ 92ರಲ್ಲಿ 82 ಪಿಕೆಪಿಎಸ್‌ಗಳು ಸ್ವಂತ ಕಟ್ಟಡ ಹೊಂದಿವೆ ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಪ್ರಾರಂಭಿಸಿದರೆ ಅದರ ಪರಿಣಾಮ ರೈತರ ಮೇಲೆ ಆಗುತ್ತದೆ. ಅದಕ್ಕಾಗಿ ಜಿಲ್ಲೆಯ ಸಹಕಾರ ಕ್ಷೇತ್ರಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಬುದ್ಧಿವಾದ ಹೇಳಿದರು. ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಸತ್ಯಪ್ಪ ನಾಯಿಕ, ಎಚ್.ಎಲ್. ಪೂಜೇರಿ, ಶ್ರೀಶೈಲ ಮಠಪತಿ ಮಾತನಾಡಿ, ಪಿಕೆಪಿಎಸ್‌ಗಳಲ್ಲಿ ರಾಜಕಾರಣ ಮಾಡಲು ಮುಂದಾದರೇ ಎಲ್ಲ ರೈತರು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದರು. ರಮೇಶ ಕತ್ತಿ ಅವರನ್ನು ಪಿಕೆಪಿಎಸ್ ಸಂಘದವರು ಸನ್ಮಾನಿಸಿದರು. ಶಾಸಕ ನಿಖಿಲ ಕತ್ತಿ, ಪವನ ಕತ್ತಿ, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಬಸವರಾಜ ಹುಂದ್ರಿ, ಬಿ.ಎಸ್.ಸುಲ್ತಾನಪುರಿ, ಗುರುರಾಜ ಕುಕರ್ಣಿ ಇತರರಿದ್ದರು.
"

ಕತ್ತಿ ಕುಟುಂಬ ರಾಜಕಾರಣ ಮಾಡಿದ್ದರೆ ವಿರೋಧಿಗಳ ಮನೆಯಲ್ಲಿ ದೀಪ ಬೆಳಗುತ್ತಿರಲಿಲ್ಲ. ನಾವು ದೀಪ ಹಚುವ್ಚ ಕೆಲಸ ಮಾಡತ್ತೇವೆ ವಿನಃ ಯಾರ ಮನೆ ದೀಪ ಆರಿಸುವುದಿಲ್ಲ. ನಿಸ್ವಾರ್ಥ ಜನಸೇವೆ ಮಾಡುವುದೇ ನಮ್ಮ ಸಂಕಲ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net