ಹೆಲ್ಮೆಟ್ ರಹಿತರಿಗೆ ಪೆಟ್ರೋಲ್ ಇಲ್ಲ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಳಗಾವಿ : ಈಚೆಗೆ ಹೆಲ್ಮೆಟ್ ರಹಿತ ಬೈಕ್ ಚಾಲನೆ ಹೆಚ್ಚಾಗುತ್ತಿರುವುದರಿಂದ ಜೂ.15ರಿಂದ 21ರವರೆಗೆ ನಗರ ಪೊಲೀಸ್ ಕಮೀಷ್ನರೇಟ್ ಹಾಗೂ ನಗರ ಸಂಚಾರ ಪೊಲೀಸ್‌ರಿಂದ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಮುಖ್ಯವಾಗಿ ಹೆಲ್ಮೆಟ್ ರಹಿತರಿಗೆ ಪೆಟ್ರೋಲ್ ಇಲ್ಲ ಎಂಬ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಸೋಮವಾರ ಬೆಳಗ್ಗೆ 11ಕ್ಕೆ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಚಾಲನೆ ನೀಡುವರು. ಜಿಪಂ ಸಿಇಒ ರಾಹುಲ ಶಿಂಧೆ, ಎಸ್ಪಿ ಕೆ.ರಾಮರಾಜನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಇತರರು ಪಾಲ್ಗೊಳ್ಳುವರು.
ಅಭಿಯಾನದ ಪ್ರಯುಕ್ತ ಒಂದೊಂದು ದಿನ ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.16ರಂದು ಹೆಲ್ಮೆಟ್ ರಹಿತರೊಂದಿಗೆ ಸಂವಹನ, 17ರಂದು ಶಾಲಾ-ಕಾಲೇಜ್‌ಗಳಲ್ಲಿ ಜಾಗೃತಿ, 19ರಂದು ಹೆಲ್ಮೆಟ್ ಧರಿಸದವರಿಗೆ ಇಂಧನ ಇಲ್ಲ ಎಂಬ ಕಾರ್ಯಕ್ರಮವನ್ನು ಆರಂಭಿಸಲಿದ್ದಾರೆ. ಜೂ.20ರಂದು ವಿವಿಧ ವೇಷಧಾರಿಗಳಿಂದ ಅರಿವು ಹಾಗೂ ಜೂ.21ರಂದು ಹೆಲ್ಮೆಟ್ ಧರಿಸಿದವರ ಮತ್ತು ಧರಿಸದವರ ಅಂಕಿ-ಅಂಸ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net